ದೇಶಪ್ರಮುಖ ಸುದ್ದಿ

ಸಾಹಸ ದೃಶ್ಯ ಅಭ್ಯಾಸದ ವೇಳೆ ಆಯತಪ್ಪಿ ಬಿದ್ದ ಸೈನಿಕರು ಗಂಭೀರ

ನವದೆಹಲಿ,ಜ.11-ಇದೇ ತಿಂಗಳ ಜ.15 ರಂದು ಆಚರಿಸಲಾಗುವ ಸೇನಾ ದಿನಾಚರಣೆಯಲ್ಲಿ ಸಾಹಸ ದೃಶ್ಯಗಳನ್ನು ಪ್ರದರ್ಶನ ಮಾಡಲು ಅಭ್ಯಾಸ ನಡೆಸುತ್ತಿದ್ದ ವೇಳೆ ಹೆಲಿಕ್ಯಾಪ್ಟರ್ ನಿಂದ ಮೂವರು ವಾಯುಪಡೆಯ ನೈನಿಕರು ಆಯತಪ್ಪಿ ಬಿದ್ದು, ಗಂಭೀರವಾಗಿ ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗಾಯಗೊಂಡಿರುವ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಗ್ಗದ ಮೂಲಕ ಹೆಲಿಕ್ಯಾಪ್ಟರ್ ಇಳಿಯುವ ಸಾಹಸ ದೃಶ್ಯಗಳನ್ನು ಅಭ್ಯಾಸದ ವೇಳೆ ಹಗ್ಗ ಕಳಚಿ ಅವಘಡ ನಡೆದಿದೆ. ಮೂವರು ಯೋಧರು 50 ಅಡಿ ಎತ್ತರಿದಿಂದ ಒಬ್ಬರ ಮೇಲೆ ಒಬ್ಬರು ಬಿದ್ದಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಸೇನೆ ಬಗ್ಗೆ ತನಿಖೆಗೆ ಆದೇಶಿಸಿದೆ. (ವರದಿ-ಎಂ.ಎನ್)

Leave a Reply

comments

Related Articles

error: