ಕರ್ನಾಟಕ

ಅಕ್ರಮ ಕಾಡು ಕುರಿ ಬೇಟೆ ಆರೋಪಿ ಬಂಧನ

ರಾಜ್ಯ(ಮಡಿಕೇರಿ)ಜ.11:- ಭಾಗಮಂಡಲ ವಲಯದ ಚೇರಂಬಾಣೆ ಬಿ.ಬಾಡಗ ಗ್ರಾಮದಲ್ಲಿನ ಅಕ್ರಮ ಬೇಟೆ ಪ್ರಕರಣ ವನ್ನು ಭೇದಿಸುವಲ್ಲಿ ಭಾಗಮಂಡಲ ವಲಯ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಬಿ.ಬಾಡಗ ಗ್ರಾಮದ ಆನೇರ ಅಜಂತ  ಎಂಬಾತ ಕಾಡು ಕುರಿ ಬೇಟೆಯಾಡಿ ತನ್ನ ಮನೆಯಲ್ಲಿ ಮಾಂಸಮಾಡಿ ಸಂಗ್ರಹಿಸಿದ ಖಚಿತ ಮಾಹಿತಿಯನ್ನು ಆಧರಿಸಿ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಮಾರ್ಗದರ್ಶನದಲ್ಲಿ  ಭಾಗಮಂಡಲ ವಲಯಾರಣ್ಯಾಧಿಕಾರಿ ಎಂ.ಎಸ್.ಚಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ  3.25.ಕೆಜಿ ಕಾಡು ಕುರಿ ಮಾಂಸ ಹಾಗೂ ಬೇಟೆಗೆ  ಬಳಸಿದ ಒಂಟಿ ನಳಿಗೆ ಕೋವಿಯನ್ನು ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಸೆಕ್ಷನ್ (9),(39),(51),(55) ರ ಪ್ರಕಾರ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪವಲಯಾರಣ್ಯಧಿಕಾರಿ ಬಿ.ಬಿ.ಅಮ್ರತೇಶ್ ಅರಣ್ಯ ರಕ್ಷಕರಾದ ಸದಾನಂದ, ವಾಗೀಶಯ್ಯ,ಮನು,ವಾಸು,ರವಿ ಚಾಲಕ ದೇವಾನಂದ ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: