ಮೈಸೂರು

ಕಾನೂನು ಬಾಹಿರ ಬಡ್ಡಿ ವ್ಯವಹಾರ : ದೂರು

ಮೈಸೂರು, ಜ. 11 : ನ್ಯೂಕಾಂತರಾಜ ಅರಸು ರಸ್ತೆಯ ರಮೇಶ್ ಗಿರವಿ ಅಂಗಡಿ ವ್ಯಾಪಾರಿ ಕಾನೂನು ಬಾಹಿರವಾಗಿ ಮಿತಿ ಮೀರಿದ ಬಡ್ಡಿ ಪಡೆದಿದ್ದಾರೆ ಎಂದು ಗ್ರಾಹಕ ಶಶಿಕುಮಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ ಸೆ.22ರಂದು ರಮೇಶ್ ಗಿರಿವಿ ಅಂಗಡಿಯಲ್ಲಿ ಚಿನ್ನಭರಣವನ್ನು ಗಿರವಿಯಿಟ್ಟು ಸುಮಾರು 22 ಸಾವಿರ ಹಣ ಪಡೆದಿದ್ದೆ, ಈ ಗಿರವಿ ಹಣಕ್ಕೆ  ಗಿರವಿ ಹಾಗೂ ಲೇವಾದೇವಿ ಕಾಯ್ದೆಯನ್ನು ಉಲ್ಲಂಘಿಸಿ ನನ್ನಿಂದ ಶೇ.2ರಷ್ಟು ಹೆಚ್ಚಿನ ಬಡ್ಡಿಯನ್ನು ಅಂಗಡಿಯವರು ಪಡೆದಿದ್ದು, ನನ್ನನ್ನು ವಂಚಿದ್ದಾರೆ ಎಂದು ಸರಸ್ವತಿಪುರಂನ ಪೊಲೀಸ್ ಠಾಣೆಯಲ್ಲಿ ಶಶಿಕುಮಾರ್ ದೂರು ದಾಖಲಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: