ಮೈಸೂರು

‘ಬ್ಲ್ಯಾಕ್ ಅಂಡ್ ವೈಟ್’ ಕಾರ್ಯಕ್ರಮ ನ.21ರಂದು

‘ನಮ್ಮ ಮೈಸೂರು ಫೌಂಡೇಷನ್’ ಮತ್ತು ‘ಯುವ ಬ್ರಿಗೇಡ್ ಮೈಸೂರು’ ಸಂಯುಕ್ತಾಶ್ರಯದಲ್ಲಿ ಸಂಜೆ 5 ಗಂಟೆಗೆ ಕುವೆಂಪು ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ‘ಬ್ಲ್ಯಾಕ್ ಅಂಡ್ ವೈಟ್’ ವಿಶಿಷ್ಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಯುವ ಬ್ರಿಗೇಡ್ ನ ಸದಸ್ಯ ಧರ್ಮರಾಜ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಕ್ರಾಂತಿಯ ಹಿಂದಿನ ಉದ್ದೇಶವನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಚಕ್ರವರ್ತಿ ಸೂಲಿಬೆಲೆ ಅವರು ಉಪನ್ಯಾಸ ನೀಡಲಿದ್ದಾರೆ. ಸನದು ಲೆಕ್ಕಿಗ(ಸಿ.ಎ) ವಿಶ್ವನಾಥ್ ಅವರು ಅರ್ಥವ್ಯವಸ್ಥೆಯ ಗೊಂದಲಗಳ ನಿವಾರಣೆ ಮಾಡಲಿದ್ದಾರೆ. ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ  ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ರಿಗೇಡ್ ನ ಸದಸ್ಯರಾದ ಬ್ರಹ್ಮಚಾರ್, ಸಂತೋಷ್ ಕುಮಾರ್, ಹರೀಶ್ ಮತ್ತು ಸಂತೋಷ್ ಹಾಜರಿದ್ದರು.

Leave a Reply

comments

Related Articles

error: