ಮೈಸೂರು

ಆರ್ಥಿಕ ಸೌಲಭ್ಯಗಳನ್ನು ಪಡೆದುಕೊಂಡು ಸಮೃದ್ಧಜೀವನ ನಡೆಸಿ : ರಾಜೇಶ್ ಕರೆ

ಮೈಸೂರು, ಜ.11: – ಮಹಿಳೆಯರು ಸ್ವಸಹಾಯ ಸಂಘಗಳ ಆರ್ಥಿಕ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮೃದ್ದಜೀವನ ನಡೆಸಬೇಕೆಂದು ಭುವನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ ಕರೆ ನೀಡಿದರು.

ಪಿರಿಯಾಪಟ್ಟಣ ತಾಲೂಕಿನ ಕೊಣಸೂರು ಗ್ರಾಮದ ಸಮೃದ್ದಿ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘದ ಮೊದಲ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಸಹಾಯ ಸಂಘಗಳನ್ನು ರಚಿಸಿ ಅದರಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸಬೇಕು, ಶುಚಿತ್ವಕ್ಕೂ ಹೆಚ್ಚು ಒತ್ತು ನೀಡಿ ಆರೋಗ್ಯಕರ ನೆಮ್ಮದಿಯ ಜೀವನ ನಡೆಸಿ ಖಾಯಿಲೆಗಳಿಂದ ದೂರವಿರಬೇಕು, ಉಳಿತಾಯ ಮಾಡುವುದರ ಮುಖಾಂತರ ಮಕ್ಕಳ ವಿದ್ಯಾಭ್ಯಾಸಕ್ಕೂ ಹೆಚ್ಚು ಗಮನ ಹರಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತಾ.ಪಂ.ಸಿಬ್ಬಂದಿ ರೋಸಿ, ಶಿಕ್ಷಕರಾದ ಜಗದೀಶ್, ಪ್ರಸನ್ನ, ಪ್ರತಿನಿಧಿಗಳಾದ ಜಯಶೀಲ, ಮಂಜುಳ, ಜ್ಯೋತಿ, ನಾಗಮಣಿ, ಚೈತ್ರ, ಅಂಜಲಿ, ಮತ್ತಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: