ಪ್ರಮುಖ ಸುದ್ದಿಮೈಸೂರು

ಕಳಲೆ ಕೇಶವಮೂರ್ತಿಯೇ ಚುನಾವಣಾ ಅಭ್ಯರ್ಥಿ ಸಿಎಂ ಘೋಷಣೆ : ರಾಜಕೀಯ ಲೆಕ್ಕಾಚಾರ ಬುಡಮೇಲು

ಮೈಸೂರು,ಜ.11:- 2018ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರಕ್ಕೆ ಕಳಲೆ ಕೇಶವಮೂರ್ತಿಯೇ ಅಭ್ಯರ್ಥಿ ಎಂದು ಸರ್ಕಾರಿ ಕಾರ್ಯಕ್ರಮದಲ್ಲೇ ಬಹಿರಂಗವಾಗಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ನಂಜನಗೂಡು ಕ್ಷೇತ್ರಕ್ಕೆ ಕಳಲೆ ಕೇಶವಮೂರ್ತಿಯೇ 2018ರ ಚುನಾವಣೆ ಅಭ್ಯರ್ಥಿ ಎಂದು ಘೋಷಿಸಿದ್ದು, ಗೆಲ್ಲುವ ಕುದುರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಣೆ ಹಾಕಿದ್ದಾರೆ. ಟಿಕೆಟ್ ಖಚಿತ ಪಡಿಸುತ್ತಲೇ ಕಳಲೆ ಕೇಶವಮೂರ್ತಿ ಹರ್ಷ ವ್ಯಕ್ತಪಡಿಸಿದ್ದು, ಬಹಿರಂಗ ಸಭೆಯಲ್ಲಿಯೇ ಮುಖ್ಯಮಂತ್ರಿಗಳ ಕಾಲಿಗೆ ಎರಗಿದ್ದಾರೆ.ಕಳಲೆ ಕೇಶವಮೂರ್ತಿ ನಂಜನಗೂಡು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು,ಇದೀಗ  ಪರಮಾಪ್ತ, ಬಲಗೈ ಬಂಟ ಎನಿಸಿಕೊಳ್ಳುವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ನಂಜನಗೂಡು ಕ್ಷೇತ್ರ ಕೈ ತಪ್ಪಿದಂತಾಗಿದೆ. ಪುತ್ರ ಸುನೀಲ್ ಬೋಸ್ ಅವರಿಗೆ ತಿ.ನರಸೀಪುರ ಬಿಟ್ಟುಕೊಟ್ಟು ನಂಜನಗೂಡಿನಲ್ಲಿ ಸ್ಪರ್ಧಿಸಲು ಮಹದೇವಪ್ಪ ಚಿಂತನೆ ನಡೆಸಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದ ರಾಜಕೀಯ ಲೆಕ್ಕಾಚಾರಗಳನ್ನೇ ಬುಡ ಮೇಲು ಮಾಡಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: