ಸುದ್ದಿ ಸಂಕ್ಷಿಪ್ತ

ಜ.12ಕ್ಕೆ ಶಾಲಾ ವಾರ್ಷಿಕೋತ್ಸವ, ಶಿಲಾನ್ಯಾಸ, ಪ್ರತಿಭಾ ಪುರಸ್ಕಾರ

ಮೈಸೂರು, ಜ. 11 : ಶ್ರಿರಾಂಪುರದ ಶ್ರೀಮತಿ ಪುಟ್ಟತಾಯಮ್ಮ ಸ್ಮಾರಕ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಎಸ್ ಎಂಎಸ್ ಕಾನ್ವೆಂಟ್ ಶಾಲೆಯ ವಾರ್ಷಿಕೋತ್ಸವ, ಶಿಲಾನ್ಯಾಸ, ಪ್ರತಿಭಾ ಪುರಸ್ಕಾರವನ್ನು ಇದೇ ಜ.12ರ ಬೆಳಗ್ಗೆ 11 ಗಂಟೆಗೆ ಶಾಲಾ ಆವರಣದಲ್ಲಿ ಆಯೋಜಿಸಿದೆ.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಶಿಲಾನ್ಯಾಸ ನೆರವೇರಿಸುವರು, ಶಾಸಕ ಎಂ.ಕೆ.ಸೋಮಶೇಖರ್ ಉದ್ಘಾಟಿಸುವರು, ವಿಧಾನಪರಿಷತ್ ಸದ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಅಧ್ಯಕ್ಷತೆ ವಹಿಸುವರು.

ಕಾರ್ಯಕ್ರಮದಲ್ಲಿ  ಮೈಲಾಕ್ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳಾ, ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಕುಮಾರ್, ಶಾಲಾ ಆಡಳಿತ ಮಂಡಳಿಯ ಪ್ರಭಾವತಿ, ಕೆ.ಪಿ.ಸುನೀಲ್ ಕುಮಾರ್ ಮೊದಲಾದವರು ಇರುವರು.

ಅಂದು ಸಂಜೆ 5 ಗಂಟೆಗೆ ನಡೆಯುವ 2017-18ನೇ ಸಾಲಿನ ಸಮಾರೋಪದಲ್ಲಿ ಉರಿಲಿಂಗ ಪೆದ್ದಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ, ಪೊಲೀಸ್ ಅಧೀಕ್ಷಕ ರವಿ ಡಿ. ಚನ್ನಣ್ಣನವರ್ ಮೊದಲಾದವರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: