ಪ್ರಮುಖ ಸುದ್ದಿಮೈಸೂರು

ಜನವರಿ 19ಕ್ಕೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ : ಸಿ.ಹೆಚ್.ವಿಜಯಶಂಕರ್

ಮೈಸೂರು,ಜ.12:- ಜನವರಿ 19ಕ್ಕೆ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರುತ್ತೇನೆಂದು ವಿಧಾನಪರಿಷತ್ ಮಾಜಿ ಸದಸ್ಯ ಸಿ.ಹೆಚ್.ವಿಜಯಶಂಕರ್ ಹೇಳಿದರು.

ರಾಮಕೃಷ್ಣ ನಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯಶಂಕರ್ ಜನವರಿ 19ರಂದು  ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಇಂದು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಅಂದು ನನ್ನ ಜೊತೆ ನನ್ನ ಹಲವು ಬೆಂಬಲಿಗರು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಿದರು. ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗುತ್ತೇನೆ. ಮರಳಿ ನನ್ನ ಮೂಲ ಮನೆಗೆ ಸೇರುತ್ತೇನೆ.ಅಂದು ವಿಶೇಷ ಪತ್ರಿಕಾಗೋಷ್ಠಿಯ ಮೂಲಕ ಎಲ್ಲ ವಿಷಯ ಬಹಿರಂಗ ಪಡಿಸುತ್ತೇನೆ. ಅಂದು ಕೆಲವರ ಮುಖವಾಡ ಬಯಲುಮಾಡುತ್ತೇವೆ.ಹಲವರ ಬಂಡವಾಳ ಬೆಳಕಿಗೆ ತರುತ್ತೇನೆ.ಯಾಕಾಗಿ ಪಕ್ಷ ಬಿಟ್ಟೆ ಎನ್ನುವುದನ್ನು ಆ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತೇನೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: