ದೇಶಪ್ರಮುಖ ಸುದ್ದಿ

ಇಸ್ರೋದಿಂದ 100ನೇ ಉಪಗ್ರಹ ಯಶಸ್ವಿ ಉಡಾವಣೆ

ಶ್ರೀಹರಿಕೋಟ,ಜ.12-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ 100ನೇ ಉಪಗ್ರಹವನ್ನು ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಹೊತ್ತ ಧ್ರುವಗಾಮಿ ಉಡಾವಣಾ ವಾಹನ(ಪಿಎಸ್‌ಎಲ್ವಿ ಸಿ-40) ಬಾಹ್ಯಾಕಾಶಕ್ಕೆ ಹಾರಿದೆ. ‘ರಾಕೆಟ್ ಕಾರ್ಟೊಸ್ಯಾಟ್-2 ದೂರಸಂವೇದಿ ಉಪಗ್ರಹ, ಸೂಕ್ಷ್ಮ ಉಪಗ್ರಹ, ನ್ಯಾನೊ ಉಪಗ್ರಹ ಹಾಗೂ 28 ವಿದೇಶಿ ನ್ಯಾನೊ ಉಪಗ್ರಹಗಳನ್ನು ಪಿಎಸ್‌ಎಲ್ವಿ -ಸಿ40 ಹೊತ್ತೊಯ್ದಿದೆ.

ಶುಕ್ರವಾರ ಬೆಳಿಗ್ಗೆ 5.29ರಿಂದ ಉಪಗ್ರಹ ಉಡಾವಣೆ ಕಾರ್ಯ ಆರಂಭಗೊಂಡು, 9.29ಕ್ಕೆ ಸರಿಯಾಗಿ ಕಾರ್ಟೋಸ್ಯಾಟ್-2 ಸರಣಿಯ ಉಪ್ರಗ್ರಹವನ್ನು ಇಸ್ರೋ ಉಡಾವಣೆ ಮಾಡಿದೆ. ಇಸ್ರೋ ಉಡಾವಣೆ ಮಾಡಿರುವ ಉಪಗ್ರಹಗಳಲ್ಲಿ ಭಾರತದ 3, ಕೆನಡಾ, ಫಿನ್’ಲ್ಯಾಂಡ್, ಫ್ರಾನ್ಸ್, ಕೊರಿಯಾ, ಬ್ರಿಟನ್, ಅಮೆರಿಕದ ಒಟ್ಟು 28 ಉಪಗ್ರಹಗಳು ಸೇರಿವೆ.

ಆ.31ರಂದು ಪಿಎಸ್‌ಎಲ್ ವಿ ರಾಕೆಟ್ ಮೂಲಕ ಇಸ್ರೋ ನಡೆಸಿದ್ದ ಉಡಾವಣೆ ವಿಫಲಗೊಂಡಿತ್ತು. ಆ ಬಳಿಕ ಇದೀಗ ಮತ್ತೆ ಪಿಎಸ್‌ಎಲ್ ವಿ ಸರಣಿ ರಾಕೆಟ್ ನಲ್ಲಿಯೇ ಉಡಾವಣೆಗೆ ಮುಂದಾಗಿದ್ದರಿಂದಾಗಿ ಇದು ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.

ಕಳೆದ ಬಾರಿ ಉಪಗ್ರಹ ಉಡಾವಣೆ ವೇಳೆ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು. ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ಇಂದು ಮತ್ತೆ ಉಪಗ್ರಹಮವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು. ದೇಶಕ್ಕೆ ಹೊಸ ವರ್ಷದ ಉಡುಗೊರೆ ನೀಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್ ಅವರು ಹೇಳಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: