ದೇಶ

ನೋಟು ಅಮಾನ್ಯದಿಂದ ಗೊಂದಲ: ಸಂಸದ ಶತ್ರುಘ್ನ ಸಿನ್ಹಾ ಟೀಕೆ

ಪ್ರಧಾನಿ ನರೇಂದ್ರ ಮೋದಿಯವರು ದೇಶದ ದೊಡ್ಡ ಮೊತ್ತದ ನೋಟುಗಳ ಅಮಾನ್ಯವನ್ನು ಹಿರಿಯ ಚಿತ್ರನಟ ಹಾಗೂ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಟೀಕಿಸಿ ಕೇಂದ್ರ ಸರ್ಕಾರವು ಸೂಕ್ತ ಸಿದ್ಧತೆ ಇಲ್ಲದೆ ಅನುಷ್ಠಾನಗೊಳಿಸಿರುವುದರಿಂದ ಲೋಪವಾಗಿದೆ ಎಂದಿದ್ದಾರೆ.

ನೋಟು ಅಮಾನ್ಯ ಕ್ರಮದಿಂದಾಗುವ ನಿರ್ಧಾರದಿಂದ ಆಗುವ ಲಾಭದ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕು ಎಂದು ಸರ್ಕಾರವೂ ಸಂಸದರಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿ, ನೋಟು ಅಮಾನ್ಯೀಕರಣಗೊಳಿಸುವ ಮುನ್ನ ಸೂಕ್ತ ವ್ಯವಸ್ಥೆ ಮಾಡದೆ ಲೋಪವಾಗಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. ನೋಟು ಅಮಾನ್ಯಗೊಳಿಸುವಾಗ ಸಾರ್ವಜನಿಕರ ಮೇಲಾಗುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅನುಷ್ಠಾನದಲ್ಲಿ ತಪ್ಪುಗಳಾಗಿವೆ. ಇದು ಪಕ್ಷದ ಕಡೆಯಿಂದಾದ ಗಂಭೀರ ಲೋಪವಾಗಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಉತ್ತರ ಪ್ರದೇಶದಲ್ಲಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು. ದೇಶದ ಅರ್ಧವ್ಯವಸ್ಥೆಯಲ್ಲಿ ಅರಾಜಕತೆ ನಿರ್ಮಾಣವಾಗಿ ಹಿಂಸಾಚಾರಕ್ಕೆ ತಿರುಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಆದರೂ ಮೋದಿಯವರ ಕ್ರಮವನ್ನು ಸಮರ್ಥಿಸಿಕೊಂಡು ಅವರನ್ನು ಕೆಚ್ಚೆದೆಯ ಹಾಗೂ ಕ್ರಿಯಾಶೀಲ ಮುಖಂಡ, ಕಪ್ಪು ಹಣ ನಿಯಂತ್ರಿಸುವಲ್ಲಿ ಸಕಾಲದಲ್ಲಿ ದಿಟ್ಟ ಹೆಜ್ಜೆಯಾಗಿದೆ ಎಂದಿದ್ದಾರೆ.

Leave a Reply

comments

Related Articles

error: