ಮೈಸೂರು

ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ನಡೆ ನುಡಿಯನ್ನು ಕಲಿತರೆ ಭವಿಷ್ಯದಲ್ಲಿ ಉತ್ತಮ ನಾಗರೀಕರಾಗುವುದಕ್ಕೆ ಸಾಧ್ಯ : ಧ್ರುವಕುಮಾರ್

ಮೈಸೂರು,ಜ.12:-ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ನಡೆ ನುಡಿಯನ್ನು ಕಲಿತರೆ ಭವಿಷ್ಯದಲ್ಲಿ ಉತ್ತಮ ನಾಗರೀಕರಾಗುವುದಕ್ಕೆ ಸಾಧ್ಯ ಎಂದು ಮೂಡಾ ಅಧ್ಯಕ್ಷ ಡಿ.ಧ್ರುವಕುಮಾರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶುಕ್ರವಾರ ಪುರಭವನದಲ್ಲಿ ಜೀನಿಯಸ್ ಪದವಿ ಮತ್ತು ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೂ ತಿರುವಿನ  ಘಟ್ಟ, ವಿದ್ಯಾರ್ಥಿ ಜೀವನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು, ಕಾಲೇಜಿನ ಸಮಯದಲ್ಲಿ ವಿದ್ಯಾರ್ಥಿಗಳು ಉತ್ತಮ ನಡೆ, ನುಡಿಯನ್ನು ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿ ಜೀವನದಲ್ಲಿ ಆಗುವ ಬದಲಾವಣೆಗಳೆ ಜೀವನ ಆಧಾರ ಸ್ಥಂಭವಾಗಲಿದೆ ಎಂದರು. ಜೀವನದಲ್ಲಿ ಎಲ್ಲವೂ ದುಡ್ಡಿನಿಂದ ಪಡೆಯುವುದಕ್ಕೆ ಸಾಧ್ಯವಿಲ್ಲ, ಒಂದು ವೇಳೆ ದುಡ್ಡಿನಿಂದ ದೊರೆತರೂ ಅದು ಹೆಚ್ಚು ಕಾಲ ಉಳಿಯುವುದಿಲ್ಲ, ಸಾಧನೆಗಳು ಪರಿಶ್ರಮದಿಂದ ಮಾತ್ರ ಮೂಡಿಬರುವುದಕ್ಕೆ  ಸಾಧ್ಯ, ಆದ್ದರಿಂದ ಪೋಷಕರ ಬಳಿ ದುಡ್ಡಿದೆ ಎಂದು ವಿದ್ಯಾರ್ಥಿ ಜೀವನವನ್ನು ಕಳೆದುಕೊಳ್ಳಬೇಡಿ, ಪರಿಶ್ರಮದಿಂದ ಸಾಧನೆ ಮಾಡಿ, ದೇಶದ ಉತ್ತಮ ಅಧಿಕಾರಿ, ಕ್ರೀಡಾಪಟು ಹಾಗೂ ರಾಜಕಾರಣಿಯಾಗಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಶಾರದಾನಿಕೇತನ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ.ಪ್ರಭು, ಜೀನಿಯಸ್ ಕಾಲೇಜಿನ ಪ್ರಾಂಶುಪಾಲೆ ಸುರೇಖಾ ಎನ್.ಪ್ರಭು ಜ್ಯೋತಿ ಪ್ರಭು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: