ಮೈಸೂರು

ದ್ವಿಚಕ್ರವಾಹನಕ್ಕೆ ಗುದ್ದಿದ ಕಾರು : ಸವಾರರು ಗಂಭೀರ

ಮೈಸೂರು,ಜ.12:- ಶ್ರೀರಾಂಪುರ ರಿಂಗ್ ರಸ್ತೆಯ ಬಳಿ ಕಾರೊಂದು ಆ್ಯಕ್ಟೀವಾ ಗಾಡಿಗೆ ಡಿಕ್ಕಿಯಾದ ಪರಿಣಾಮ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ನಂಜನಗೂಡು ರಸ್ತೆಯಿಂದ ಕಾರೊಂದು ವೇಗವಾಗಿ ಬಂದಿದ್ದು,  ಆಕ್ಟಿವಾ ಗಾಡಿಯ ಸವಾರ  ಟರ್ನ್ ತೆಗೆದುಕೊಳ್ಳಲು ಯತ್ನಿಸುವ ವೇಳೆ ಕಾರು ದ್ವಿಚಕ್ರವಾಹನಕ್ಕೆ ಗುದ್ದಿದೆ. ಇದರಿಂದ  ಇಬ್ಬರೂ ಗಂಭೀರ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೆ.ಆರ್.ಸಂಚಾರಿ ಠಾಣೆಯ ಟ್ರಾಫಿಕ್ ಇನ್ಸಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಕೆ.ಆರ್.ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: