ಕರ್ನಾಟಕ

ಆಟೋ ಮರಕ್ಕೆ ಡಿಕ್ಕಿ: ಒಂದೇ ಕುಟುಂಬದ ಮೂವರ ಸಾವು

ಕೋಲಾರ,ಜ.13: ಚಾಲಕನ ನಿಯಂತ್ರಣ ತಪ್ಪಿ ಆಟೋ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಮೂವರು ಸಾವನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ಆಟೋದಲ್ಲಿದ್ದ ಒಂದೇ ಕುಟುಂಬದ  ಭಾಸ್ಕರ್(35), ಪಾರ್ವತಮ್ಮ(38), ಗೌರಮ್ಮ(33) ಮೃತಪಟ್ಟ ದುರ್ದೈವಿಗಳು.

ಬಂಗಾರಪೇಟೆ ತಾಲೂಕು ಸುಣ್ಣಕುಪ್ಪಂ ಗ್ರಾಮದಿಂದ ಮುಳಬಾಗಿಲು ಬಳಿಯ ಖಾದ್ರಿಪುರದ ದೇವಾಲಯಕ್ಕೆ ಒಂದೇ ಆಟೋದಲ್ಲಿ 7 ಮಂದಿ ಹೋಗಿ ದೇವರ ದರ್ಶನ ಮಾಡಿಕೊಂಡು ಹಿಂದಿರುಗುವಾಗ ಆಟೋ ಚಾಲನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಪಿ.ಎಸ್ )

Leave a Reply

comments

Related Articles

error: