ಮೈಸೂರು

ಇಂದಿರಾ ಕ್ಯಾಂಟೀನ್ ಆರಂಭದ ಮರುದಿನವೇ ಅಪಸ್ವರ : ಬೆಳ್ಳಂಬೆಳಿಗ್ಗೆ ಏನೂ ಸಿಗುತ್ತಿಲ್ಲ ಎಲ್ಲ ಖಾಲಿ..ಖಾಲಿ..ಆಕ್ರೋಶ

ಮೈಸೂರು,ಜ.13-ಬಡವರು, ಶ್ರಮಿಕರು, ಕಾರ್ಮಿಕರಿಗೆ ಕಡಿಮೆದರದಲ್ಲಿ ಶುಚಿ-ರುಚಿಯಾದ ಉಪಾಹಾರ ದೊರೆಯಲಿ ಎಂದು ರಾಜ್ಯ ಸರ್ಕಾರ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದು, ಶುಕ್ರವಾರವಷ್ಟೇ (ಜ.12) ನಗರದ ಕಾಡಾ ಕಚೇರಿ ಆವರಣದಲ್ಲಿ ಮೊದಲ ಇಂದಿರಾ ಕ್ಯಾಂಟೀನ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಆದರೆ ಪ್ರಾರಂಭದ ಮರುದಿನವೇ ಇಂದಿರಾ ಕ್ಯಾಂಟೀನ್ ಹಸಿದ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಿದೆ.

ಶನಿವಾರ ಬೆಳಿಗ್ಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಪಾಹಾರ ಸೇವಿಸಲು ಆಗಮಿಸಿದ್ದ ಸಾರ್ವಜನಿಕರು ಬೆಳಿಗಿನ ಉಪಹಾರ ಸಿಗದೆ ಆಕ್ರೋಶಗೊಂಡಿದ್ದಾರೆ. ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗಿನ ಉಪಾಹಾರದ ಸಮಯ ಪ್ರಾರಂಭವಾಗುವುದೇ ಬೆಳಿಗ್ಗೆ 7.30 ರಿಂದ ಆದರೆ ಆ ವೇಳೆಗೆ ತಿಂಡಿ ಖಾಲಿಯಾಗಿದೆ ಎಂದು ತಿಳಿದ ಸಾರ್ವಜನಿಕರು ಆಕ್ರೋಶಗೊಂಡು ಚುನಾವಣೆ ನಂತರ ಇಂದಿರಾ ಕ್ಯಾಂಟೀನ್ ಉಡೀಸ್ ಆಗಲಿದೆ. ಹೊಟ್ಟೆ ಹೊಡೆದುಕೊಂಡು ಹಸಿವು ಸ್ವಾಮಿ ಎನ್ನುತ್ತಿದ್ದು, ಇದೆಲ್ಲ ವೋಟಿಗಾಗಿ ಮಾಡುತ್ತಿರುವ ಗಿಮಿಕ್ ಎಂದು ಆರೋಪಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೆ.ಆರ್.ಠಾಣೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು ಎಲ್ಲರನ್ನು ಹೊರಗೆ ಕಳುಹಿಸಿದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: