ಸುದ್ದಿ ಸಂಕ್ಷಿಪ್ತ

ಸರಕಾರಿ ಶಾಲೆಯಲ್ಲಿ ಮಕ್ಕಳಿಂದ ಕೆಲಸ: ವಿದ್ಯಾರ್ಥಿಯ ಕೈಬೆರಳು ಕಟ್

ಸರಕಾರಿ ಶಾಲೆಯೊಂದರಲ್ಲಿ ಮಕ್ಕಳ ಕೈಯ್ಯಲ್ಲಿ ಕೆಲಸ ಮಾಡಿಸುತ್ತಿದ್ದ ಸಂದರ್ಭದಲ್ಲಿ 6ನೇ ತರಗತಿಯ ವಿದ್ಯಾರ್ಥಿಯೊಬ್ಬನ ಕೈಬೆರಳು ಕಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಎಚ್‍.ಡಿ. ಕೋಟೆಯ ನೇರಳೆ ಗ್ರಾಮದ ಸರಕಾರಿ ಶಾಲೆಯಲ್ಲಿ ಶನಿವಾರ ಈ ಘಟನೆ ಸಂಭವಿಸಿದ್ದು, ಆರನೇ ತರಗತಿಯ ಮಕ್ಕಳಿಂದ ಬೆಂಚ್ ಎತ್ತಿಸುವ ಕೆಲಸ ಮಾಡಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪವನ್ ಎಂಬ ಬಾಲಕನ ಕೈಬೆರಳು ಕಟ್ಟಾಗಿದ್ದು, ಸದ್ಯ ಎಚ್‍.ಡಿ.ಕೋಟೆ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಸರಕಾರಿ ಶಾಲೆಗಳಲ್ಲಿ ಮಕ್ಕಳ ಕೈಯ್ಯಲ್ಲಿ ಕೆಲಸ ಮಾಡಿಸಬಾರದೆಂದು ನಿಯಮವಿದ್ದರೂ ಕೆಲಸ ಮಾಡಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಸಾರ್ವಜನಿಕರು ಶಿಕ್ಷಕರ ವಿರುದ್ಧ ಹರಿಹಾಯ್ದಿದ್ದಾರೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: