ಸುದ್ದಿ ಸಂಕ್ಷಿಪ್ತ
ಹೋಟೆಲ್ ಮಾಲೀಕರ ಸಂಘದಿಂದ : ಭವಿಷ್ಯ ನಿಧಿ ಜಾಗೃತಿ -ಸಂವಾದ ಜ.17
ಮೈಸೂರು, ಜ. 13 : ಹೋಟೆಲ್ ಮಾಲೀಕರ ಸಂಘ, ಹೋಟೆಲ್ ಮಾಲೀಕರ ಸಂಘದ ಧರ್ಮದತ್ತಿ ಸಂಯುಕ್ತವಾಗಿ ‘ಕಾರ್ಮಿಕರ ಭವಿಷ್ಯ ನಿಧಿಯ ಬಗ್ಗೆ ಜಾಗೃತಿ ಹಾಗೂ ಸಂವಾದ’ ಕಾರ್ಯಕ್ರಮವನ್ನು ಜ.17ರ ಬೆಳಗ್ಗೆ 10.30ಕ್ಕೆ ಕೃಷ್ಣಮೂರ್ತಿಪುರಂನಲ್ಲಿರುವ ಸಂಘದ ಕಚೇರಿ ಕುತ್ತೆತ್ತೂರು ಸೀತಾರಾಮ ಭವನದ ಡಾ.ಜಗನ್ನಾಥ್ ಶೆಣೈ ಸಭಾಂಗಣದಲ್ಲಿ ಆಯೋಜಿಸಿದೆ.
ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಅವರು ಅಧ್ಯಕ್ಷತೆ, ಕಾರ್ಮಿಕರ ಭವಿಷ್ಯನಿಧಿ ಇಲಾಖೆಯ ಸಹಾಯಕ ಆಯುಕ್ತ ಮನೋಜ್ ಪ್ರಭು, ಸಕ್ಷಮ ಅಧಿಕಾರಿ ಆನಂದ್, ಧರ್ಮದತ್ತಿಯ ಅಧ್ಯಕ್ಷ ರವಿಶಾಸ್ತ್ರಿ ಭಾಗಿಯಾಗುವರು. (ಕೆ.ಎಂ.ಆರ್)