ಸುದ್ದಿ ಸಂಕ್ಷಿಪ್ತ

“ಮೂಲಸೌಕರ್ಯ ಮತ್ತು ಸುಸ್ಥಿರಅಭಿವೃದ್ಧಿ : ಸಮಸ್ಯೆಗಳು ಮತ್ತು ಸವಾಲುಗಳು” – ರಾಷ್ಟ್ರೀಯ ಸಮ್ಮೇಳನ

ಮೈಸೂರು,ಜ.16:- ಬಾಸುದೇವ ಸೋಮಾನಿ ಕಾಲೇಜಿನ ವಾಣಿಜ್ಯ, ನಿರ್ವಹಣಾಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಭಾಗದ ವತಿಯಿಂದ “ಮೂಲಸೌಕರ್ಯ ಮತ್ತು ಸುಸ್ಥಿರಅಭಿವೃದ್ಧಿ – ಸಮಸ್ಯೆಗಳು ಮತ್ತು ಸವಾಲುಗಳು” ಕುರಿತು ರಾಷ್ಟ್ರೀಯ ಸಮ್ಮೇಳನವನ್ನು ಜ.19 ರಂದು ಬೆಳಗ್ಗೆ 10ಕ್ಕೆ  ಆಯೋಜಿಸಲಾಗಿದೆ.

ಸಮ್ಮೇಳನದಲ್ಲಿ ಪ್ರಾಧ್ಯಾಪಕರು, ಶಿಕ್ಷಣತಜ್ಞರು, ಸಂಶೋಧಕರು, ವಾಣಿಜ್ಯ ತಜ್ಞರು, ಕೈಗಾರಿಕೋದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.  ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸಾರಿಗೆ ಸಂಪರ್ಕ, ಕೃಷಿ, ಕೈಗಾರಿಕೆ, ಬ್ಯಾಂಕಿಂಗ್, ಹಣಕಾಸು, ವಿಮೆ & ವಿದೇಶಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಾಲ್ಕು ತಾಂತ್ರಿಕ ಗೋಷ್ಠಿಗಳಲ್ಲಿ ವಿಸ್ತೃತ ಚರ್ಚೆಗಳು ನಡೆಯುತ್ತವೆ ಹಾಗೂ ಸಂಶೋಧನಾ ಲೇಖನಗಳು ಮಂಡನೆಯಾಗಲಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಿ. ಭಾರತಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಡಾ. ಕೆ. ಮಾರನ್, ಪ್ರೊಫೆಸರ್ ಮತ್ತು ನಿರ್ದೇಶಕರು, ಶ್ರೀ ಸಾಯಿರಾಂ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್, ಚೆನ್ನೈ ಇವರು ಆಶಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಜಿ ಕೊಟ್ರೇಶ್ವರ್, ದಿ ಇನ್ಸ್‍ಟಿಟ್ಯೂಟ್ ಆಫ್ ಎಜುಕೇಷನ್ ಸಂಸ್ಥೆಯ ಅಧ್ಯಕ್ಷ ಹೆಚ್.ಎನ್. ನಾಗರಾಜ್ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಡಾ. ಎಂ.ಪುಟ್ಟಸ್ವಾಮಿ ಇವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಮಹದೇವಯ್ಯ ವಹಿಸಲಿದ್ದಾರೆ. ಸಮ್ಮೇಳನದ ಕಾರ್ಯದರ್ಶಿಗಳಾದ ಪ್ರೊ. ಎನ್.ಎಸ್. ವೇಣುಗೋಪಾಲ್ ಹಾಗೂ ವ್ಯವಸ್ಥಾಪಕ ಕಾರ್ಯದರ್ಶಿಗಳಾದ ಪ್ರೊ. ಬಿ.ಎಂ ರಮೇಶ ಉಪಸ್ಥಿತರಿರುತ್ತಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲ್ಲಿ ಸಂಶೋಧನಾ ಲೇಖನಗಳನ್ನೊಳಗೊಂಡ ಪುಸ್ತಕ ಬಿಡುಗಡೆಯಿದ್ದು,ಸಂಜೆ 4.15 ಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಹೆಚ್ ರಾಜಶೇಖರ್ ಸಮಾರೋಪ ಭಾಷಣ ಮಾಡಲಿದ್ದಾರೆ. (ಎಸ್.ಎಚ್)

Leave a Reply

comments

Related Articles

error: