
ಮೈಸೂರು
ರಸ್ತೆ ಡಾಂಬರೀಕರಣಕ್ಕೆ ಶಾಸಕ ಸೋಮಶೇಖರ್ರಿಂದ ಚಾಲನೆ
ಹೊಸಬಂಡಿಕೇರಿಯ ಒಂದನೇ ಕ್ರಾಸ್ನಿಂದ ಆರನೇ ಕ್ರಾಸ್ವರೆಗೆ ರೂ.95,00.000/- ವೆಚ್ಚದಲ್ಲಿ ರಸ್ತೆಗಳಿಗೆ ಡಾಂಬರೀಕರಣ ಮತ್ತು ಕನ್ಸರ್ವೆನ್ಸಿ ಗಲ್ಲಿಗಳಿಗೆ ಕಾಂಕ್ರಿಟ್ ರಸ್ತೆಗಳ ನಿರ್ಮಾಣಕ್ಕೆ ಶಾಸಕ ಎಂ.ಕೆ.ಸೋಮಶೇಖರ್ ಹಾಗೂ ವಾರ್ಡಿನ ನಗರಪಾಲಿಕೆ ಸದಸ್ಯ ಎನ್.ಸುನೀಲ್ ಕುಮಾರ್ ಇತ್ತೀಚಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ದೊಡ್ಡವೀರಪ್ಪ, ತಮ್ಮಣ್ಣ, ನಾಗಣ್ಣ, ಟೈಲರ್ ರಮೇಶ್, ವಿಕ್ರಾಂತ್ ರಮೇಶ್, ವಿಜಯಲಕ್ಷ್ಮೀ, ನಿಂಗಮ್ಮ, ಗೋಪಾಲಕರ ಸಂಘ ಹಾಗೂ ಮೂಲ ನಿವಾಸಿಗಳು ಉಪಸ್ಥಿತರಿದ್ದರು.