ಮೈಸೂರು

ಮೈಸೂರು ಜಿಲ್ಲಾ ಬ್ರಾಹ್ಮಣರ ನಡೆ ಬೆಳಗಾವಿ ಕಡೆ : ಬ್ರಹ್ಮ ರಥಕ್ಕೆ ಚಾಲನೆ

ಬೆಳಗಾವಿಯಲ್ಲಿ ಡಿ.11 ಮತ್ತು 12ರಂದು ನಡೆಯುವ ಬ್ರಾಹ್ಮಣ ಮಹಾಸಮ್ಮೇಳನದಂಗವಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಉಪಾಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್ ಬ್ರಹ್ಮ ರಥಕ್ಕೆ ಚಾಲನೆ  ನೀಡಿದರು.

ಮೈಸೂರು ಜಿಲ್ಲಾ ಬ್ರಾಹ್ಮಣರ ನಡೆ ಬೆಳಗಾವಿ ಕಡೆ ಎಂಬ ಘೋಷವಾಕ್ಯದೊಂದಿಗೆ ಜಿಲ್ಲೆಯ ಎಂಟು ತಾಲೂಕುಗಳಾದ ಪಿರಿಯಾಪಟ್ಟಣ, ಹುಣಸೂರು, ಹೆಗ್ಗಡದೇವನಕೋಟೆ, ಟಿ.ನರಸೀಉರ, ನಂಜನಗೂಡು, ವರುಣ, ಚಾಮುಂಡೇಶ್ವರಿ ಹಾಗೂ ಚಾಮರಾಜಕ್ಷೇತ್ರದಲ್ಲಿ ದಿ.17 ರಿಂದ ಡಿ.5ರವರೆಗೆ ಬ್ರಹ್ಮರಥದಲ್ಲಿ ಸಮಾವೇಶದ ಪ್ರವೇಶ ಪತ್ರವನ್ನು ಭರ್ತಿ ಮಾಡಿ ಡಿ.10ರಂದು ಸಂಜೆ ಹೊರಡುವ ವ್ಯವಸ್ಥೆ ಮಾಡಲಾಗಿದೆ.  ಪ್ರವೇಶ ಪಡೆಯುವ ಸಮಾಜ ಬಾಂಧವರಿಗೆ ಊಟ, ವಸತಿ, ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗುವುದು. ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನಟರಾಜ್ ಜೋಯಿಸ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾರಣ್ಯ, ಎ.ಎನ್.ಶೇಷಾದ್ರಿ, ವ್ಯವಸ್ಥಾಪಕ ಕಾರ್ಯದರ್ಶಿ ಅನಂತಪ್ರಸಾದ್, ವಿ.ವಸಂತ್, ಅನಂದ್, ರಾಘವೇಂದ್ರ, ವಿಜಯಲಕ್ಷ್ಮೀ, ಮಹಾಲಕ್ಷ್ಮೀ, ಸುಶೀಲ ಹಾಗೂ ಜಿಲ್ಲಾ ಮೇಲ್ವಿಚಾರಕ ಕೆ.ರಘುರಾಂ, ಶ್ರೀನಿವಾಸ್, ನಾಗರಾಜ್ ಇನ್ನು ಇತರರನ್ನು ವ್ಯವಸ್ಥಾಪಕರನ್ನಾಗಿ ನೇಮಕ ಮಾಡಲಾಯಿತು.

Leave a Reply

comments

Related Articles

error: