
ಮೈಸೂರು
ರಾಷ್ಟ್ರೀಯ ನಾಟಕೋತ್ಸವ ‘ಬಹುರೂಪಿ’ಯಲ್ಲಿನ ಜ.17ರ ನಾಟಕಗಳು : ಸಿನಿಮಾಗಳು
ಮೈಸೂರು, ಜ. 16 : ಸರ್ಕಾರದ ರಂಗಾಯಣದ ‘ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವ ಇದೇ ಜ.14 ರಿಂದ 21ರವರೆಗೆ ನಗರದಲ್ಲಿ ನಡೆಯುತ್ತಿದೆ. ಜ.17ರ ಬುಧವಾರದ ಕಾರ್ಯಕ್ರಮಗಳು ಈ ರೀತಿ ಇವೆ.
ಕಿಂದರಜೋಗಿಯಲ್ಲಿ (5) ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ‘ಜಾನಪದ ಕಲಾ ಪ್ರದರ್ಶನ’
ವನರಂಗದಲ್ಲಿ (7) ಚಂದ್ರದಾಸನ್ ನಿರ್ದೇಶನದ ಲೋಕಧರ್ಮಿ ಕೊಚ್ಚಿನ್ ತಂಡದ ‘ ಕಾಳಿ ನಾಟಕಂ’
ಕಿರು ರಂಗಮಂದಿರದಲ್ಲಿ (6) ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನ, ಉಡುಪಿಯ ವಲ್ಲರಿ ಕಾಡೇಕರ್ ಅವರ ಪರಿಕಲ್ಪನೆಯ ‘ಶೂರ್ಪನಖಾ-ಇನ್ನೊಂದು ಮುಖ’ ನಾಟಕ.
ಭೂಮಿಗೀತಾದಲ್ಲಿ (5.30) ವಿದ್ದು ಉಚ್ಚಿಲ ನಿರ್ದೇಶನ, ಪು.ತಿ.ನ ರಚನೆ, ಮಂಗಳೂರು ನಂದಗೋಕುಲ ತಂಡದ ‘ಗೋಕುಲ ನಿರ್ಗಮನ’ ನಾಟಕ.
ಕಲಾಮಂದಿರದಲ್ಲಿ (7.30) ರಾಜೇಂದ್ರ ಕಾರಂತ್ ಅವರ ರಚನೆ, ನಿರ್ದೇಶನ. ಮೈಸೂರು ಅಭಿಯಂತರರು ತಂಡದಿಂದ ಮರಣ ಮೃದಂಗ ನಾಟಕ ಪ್ರದರ್ಶನ.
ಚಲನಚಿತ್ರೋತ್ಸವ : ಲಾಸ್ಟ್ ಟ್ರೈನ್ ಹೋಮ್, ಕೊನ್ –ಟಕಿ, ಹಾಗೂ ದಿ ವೇ ಬ್ಯಾಕ್ (ಕೆ.ಎಂ.ಆರ್)