ಮೈಸೂರು

ಸಂಸ್ಕೃತ ಭಾಷಣ ಸ್ಪರ್ಧೆ ಜೆಎಸ್ಎಸ್ ನ ಟಿ.ಜೆ.ಶ್ರೀವತ್ಸ ರಾಜ್ಯಕ್ಕೆ ಪ್ರಥಮ

ಮೈಸೂರು, ಜ.16 : ಜೆಎಸ್ಎಸ್ ಮಹಾವಿದ್ಯಾಪೀಠದ ಕೆ.ಎಸ್.ಎಸ್ ಸಂಸ್ಕೃತ ಪಾಠಶಾಲೆಗೆ ಸಾಹಿತ್ಯ ತರಗತಿಯ ವಿದ್ಯಾರ್ಥಿ ಟಿ.ಜೆ.ಶ್ರೀವತ್ಸ ಅವರು ‘ನದಿ ಸಂರಕ್ಷಣಮ್’ ವಿಷಯದ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ವತಿಯಿಂದ ಯಡಿಯೂರು ಶ್ರೀಬಾಳೆಹೊನ್ನೂರು ಶಾಖಾಮಠದಲ್ಲಿ ನಡೆದ ರಾಜ್ಯಮಟ್ಟದ ಸಂಸ್ಕೃತ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅವರು ಬಹುಮಾನ ವಿತರಿಸಿದರು.

ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪದ್ಮಾಶೇಖರ್, ನಿರ್ದೇಶಕರಾದ ಡಾ.ಗಿರೀಶ್ ಚಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಶಾಲೆಗೂ ಹಾಗೂ ಸಂಸ್ಥೆಗೆ ಕೀರ್ತಿ ತಂದ ಟಿ.ಜೆ.ಶ್ರೀವತ್ಸ ಅವರನ್ನು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: