ಪ್ರಮುಖ ಸುದ್ದಿಮೈಸೂರು

ಹಣ ನುಂಗಿದವರೇ ಇನ್ನೂ ಇದ್ದಾರೆ ಕಾಯಕದಲ್ಲಿ..! ಲಕ್ಷ ಲಕ್ಷ ಹಣವನ್ನು ನುಂಗಿದವರ ಪರ ನಿಂತಿದೆಯೇ ಜಿಲ್ಲಾಡಳಿತ?

ಮೈಸೂರು,ಜ.17:- ಲಕ್ಷ ಲಕ್ಷ ಹಣವನ್ನು ನುಂಗಿದವರ ಪರ ಮೈಸೂರು ಜಿಲ್ಲಾಡಳಿತ  ನಿಂತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮೂರು ವರ್ಷಗಳ ಹಿಂದೆ ನಂಜುಂಡೇಶ್ವರನ ದೇವಸ್ಥಾನದ ದಾಸೋಹದಲ್ಲಿ ಸಿಬ್ಬಂದಿಯೋರ್ವರು ಆರೂವರೆ ಲಕ್ಷ ಹಣವನ್ನು ಗುಳುಂ ಮಾಡಿದ್ದರು. ಹಗರಣ ಬಯಲಿಗೆ ಬಂದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನಂಜನಗೂಡಿನ ನಂಜುಂಡೇಶ್ವರನ ದೇವಸ್ಥಾನದಲ್ಲಿನ ದಾಸೋಹ ಘಟಕದಲ್ಲಿ ಗೀತಾ ಎಂಬಾಕೆ ರಶೀದಿ ಹರಿದು ಹಣ ಪಡೆಯುವ  ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. 2015-16 ರಲ್ಲಿ ಬರೋಬ್ಬರಿ ಆರೂವರೆ ಲಕ್ಷ ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು .  ಲೆಕ್ಕ ಪರಿಶೀಲನಾ ಇಲಾಖೆ ಅಧಿಕಾರಿಗಳೇ ಈ ಹಗರಣವನ್ನು  ಬಯಲಿಗೆಳೆದಿದ್ದರು. ಅಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶಿವಲಿಂಗೇ ಗೌಡ ಎಂಬುವರು ಕಾರ್ಯನಿರ್ವಹಿಸುತ್ತಿದ್ದರು .ಈ ಹಗರಣ ಬೆಳಕಿಗೆ ಬಂದಾಗ ಜಿಲ್ಲಾ ಆಡಳಿತಕ್ಕೆ ಈ ಹಗರಣದ ವಿವರವನ್ನು ತಲುಪಿಸಿದರು .ಆದರೆ ದುರಂತವೆಂದರೆ ಲಕ್ಷಾಂತರ ರೂ. ಹಗರಣದ ವಿರುದ್ಧ ಜಿಲ್ಲಾಡಳಿತ ಇದುವರೆಗೂ ಕ್ರಮ ಕೈಗೊಂಡಿಲ್ಲ .ಲಕ್ಷ ಲಕ್ಷ ಹಣವನ್ನು ನುಂಗಿರುವ ಗೀತಾ ಎಂಬ ಸಿಬ್ಬಂದಿ ಈವಾಗಲೂ ಅದೇ ಸ್ಥಳದಲ್ಲಿ  ಕಾರ್ಯನಿರ್ವಹಿಸುತ್ತಿದ್ದಾಳೆ. ಈ ಭ್ರಷ್ಟಾಚಾರ ಸಿಬ್ಬಂದಿಯ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳದ ಕಾರಣ ಇಂದು ನಂಜುಂಡೇಶ್ವರನ ಸನ್ನಿಧಿಯಲ್ಲಿ ಯಥೇಚ್ಛವಾಗಿ ಲಕ್ಷ ಲಕ್ಷ ಹಣವನ್ನು ಗುಳುಂ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮೂರು ವರ್ಷಗಳ ಹಿಂದೆ ಆರೂವರೆ ಲಕ್ಷ ರೂಗಳನ್ನು ನುಂಗಿರುವ ಈ ಸಿಬ್ಬಂದಿಯ ವಿರುದ್ಧ ಏಕೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬುದು ಪ್ರಶ್ನೆಯಾಗಿ ಕಾಡತೊಡಗಿದೆ . ಜಿಲ್ಲಾ ಆಡಳಿತ ಈ ಭ್ರಷ್ಟ ಸಿಬ್ಬಂದಿಗಳ ಬೆನ್ನೆಲುಬಾಗಿ ನಿಂತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಉನ್ನತ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಗಳಿಸಿರುವ ನಂಜುಂಡನ ಸನ್ನಿಧಿಯಲ್ಲಿ ನಡೆದಿರುವ ಹಗರಣಗಳಿಗೆ ಕಡಿವಾಣ ಹಾಕಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: