ಸುದ್ದಿ ಸಂಕ್ಷಿಪ್ತ

ವಿದ್ಯುತ್ ಹರಿಯುವಿಕೆ ಎಚ್ಚರ ವಹಿಸಿ

ಮೈಸೂರು, ಜ.17:- ಮೈಸೂರು ನಗರದಲ್ಲಿ  ನೂತನವಾಗಿ ಸ್ಥಾಪಿಸಲಾಗಿರುವ 2×12.5 ಎಂ.ವಿ.ಎ, 66/11 ಕೆ.ವಿ ವಿದ್ಯುತ್ ಉಪ ಕೇಂದ್ರಕ್ಕೆ ನೂತನವಾಗಿ ನಿರ್ಮಿಸಿರುವ 66 ಕೆ.ವಿ ಮಾರ್ಗವನ್ನು ಜನವರಿ 16 ರ ನಂತರ  ವಿದ್ಯುತ್ ಚೇತನಗೊಳಿಸಲಾಗುವುದು.
ಈ  66 ಕೆ.ವಿ ಏಕ ಮಾರ್ಗವು ಸುಮಾರು 630 ಚಮೀಮಿನ ಭೂಗತ ಕೇಬಲಿನ ವಿದ್ಯುತ್ ಲಿಲೋ ಮಾರ್ಗವು ಸುಮಾರು 3.08 ಕಿಮೀ ವರೆಗೆ ಹಾಲಿ ಇರುವ 66 ಕೆ.ವಿ ಬೀಗಾದಿ- ಮೈಸೂರು ಸೌತ್ ಲೈನ್ ಸಂಪರ್ಕ ಮಾರ್ಗದಿಂದ      (ಮಾತಾ ಅಮೃತಾನಂದಮಯಿ ಶಾಲೆ ಕ್ರಾಸ್‍ನಿಂದ) ಗದ್ದಿಗೆ-ಬೋಗಾದಿ ಮುಖ್ಯ ರಸ್ತೆಯ ಸರಹದ್ದಿನ, ಹರ್ಷ ಬಾರ್, ಪ್ರಾದೇಶಿಕ ಷಿಕ್ಷಣ ಸಂಸ್ಥೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯಗಳ ಕಾಂಪೌಂಡ್ ಪಕ್ಕ ಹಾಗೂ ಕುಕ್ಕರಹಳ್ಳಿ ಕೆರೆ ಏರಿ ಪಕ್ಕದ ಮಾರ್ಗವಾಗಿ ಹೊಸದಾಗಿ ನಿರ್ಮಾಣ ಮಾಡುತ್ತಿರುವ  66/11 ಕೆ.ವಿ. ಕುಕ್ಕರಹಳ್ಳಿ ಜಿಐಎಸ್ ( ದೋಭಿಘಾಟಿನ ಹತ್ತಿರ) ವಿದ್ಯುತ್ ವಿತರಣಾ ಕೇಂದ್ರಕ್ಕೆ ಹೋಗುತ್ತದೆ. ಭೂಗತ ಕೇಬಲ್ ಮಾರ್ಗದಲ್ಲಿ ಯಾವುದೇ  ಸಾರ್ವಜನಿಕರು/ ಸರ್ಕಾರಿ ಸಂಸ್ಥೆ/ಖಾಸಗಿ ಸಂಸ್ಥೆಯವರು ರಸ್ತೆಯನ್ನು ಅಗೆಬಾರದು. ಇದು ಬಹಳ ಅಪಾಯಕಾರಿಯಾಗಿದ್ದು, ವಿದ್ಯುತ್ ಅಪಘಾತವಾಗುವ ಸಾಧ್ಯವಿರುತ್ತದೆ. ಈ ಸೂಚನೆಯನ್ನು ಉಲ್ಲಂಘಿಸಿದ ಪಕ್ಷದಲ್ಲಿ ಉಂಟಾಗುವ ಯಾವುದೇ ತರಹದ ಅಪಘಾತಗಳಿಗೆ  ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಜವಾಬ್ದಾರವಲ್ಲ. ರಸ್ತೆಯನ್ನು ಅಗೆಯುವ ಸಂದರ್ಭದಲ್ಲಿ ಉಂಟಾಗುವ ನಿಗಮದ ಆಸ್ತಿ ಮತ್ತು ಕಂದಾಯ ನಷ್ಟವನ್ನು ಸಂಬಂಧಪಟ್ಟವರೇ ಭರಿಸಬೇಕಾಗುತ್ತದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

Check Also

Close
error: