ಸುದ್ದಿ ಸಂಕ್ಷಿಪ್ತ

ಕಡತ ವಿಲೇವಾರಿ ಆಂದೋಲನ

ಮೈಸೂರು,ಜ.17-ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಅಧೀನ ಕಚೇರಿಗಳಲ್ಲಿ ಆಡಳಿತವನ್ನು ಚುರುಕುಗೊಳಿಸಲು ಹಾಗೂ ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಡತ ವಿಲೇವಾರಿ ಆಂದೋಲನವನ್ನು ಜ.16 ರಿಂದ ಫೆಬ್ರವರಿ 15 ರವರೆಗೆ ಹಮ್ಮಿಕೊಳ್ಳಲಾಗಿದೆ.

ದೀರ್ಘಾವಧಿಯಿಂದ ಬಾಕಿ ಇರುವ ಕಡತಗಳನ್ನು ಆದ್ಯತೆ ಮೇಲೆ ವಿಲೇಗೊಳಿಸಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ಅಧೀನ ಕಚೇರಿಗಳಿಂದ ವರದಿ ಅಭಿಪ್ರಾಯಕ್ಕಾಗಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಇಲಾಖೆಗಳಿಂದ ವರದಿ ಸಲ್ಲಿಸಲು ಹಾಗೂ ಸಾರ್ವಜನಿಕರು ತಮ್ಮ ಕಡತಗಳಿಗೆ ಸಂಬಂಧಿಸಿದಂತೆ ನೀಡಬೇಕಾದ ದಾಖಲೆ/ ಮಾಹಿತಿಗಳನ್ನು ನೀಡಲು 7 ದಿನಗಳ ಕಾಲಾವಕಾಶ ನೀಡಲಾಗಿದೆ. ಒಂದು ತಿಂಗಳ ಕಡತ ವಿಲೇವಾರಿ ಆಂದೋಲನವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳು ಜಿಲ್ಲಾಡಳಿತದೊಂದಿಗೆ ಸಹಕರಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ವರದಿ-ಎಂ.ಎನ್)

Leave a Reply

comments

Related Articles

error: