ಮೈಸೂರು

ಹಾಲು ಸರಬರಾಜು ವಾಹನಕ್ಕೆ ಬೈಕ್ ಡಿಕ್ಕಿ : ಮಹಿಳೆ ಸಾವು

ಮೈಸೂರು,ಜ.17:- ಹಾಲು ಸರಬರಾಜು ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನ ವರುಣ ಕೆರೆ ಬಳಿ ನಡೆದಿದೆ.

ಚಾಮರಾಜನಗರದ ಅಜ್ಜಿಪುರದ ಕುರುಬರದೊಡ್ಡಿ ಗ್ರಾಮದ ನಿವಾಸಿ ಸಲ್ಮಾಬಾನು (30 )ಎಂದು ಗುರುತಿಸಲಾಗಿದೆ.  ಸಲ್ಮಾಬಾನು ತನ್ನ ಪತಿ ಹಾಗೂ ಮೂವರು ಮಕ್ಕಳ ಜೊತೆ ಬೈಕ್ ನಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಮೈಸೂರು – ಟಿ.ನರಸೀಪುರ ರಸ್ತೆಯ ವರುಣ ಕೆರೆ ಬಳಿ  ಹಾಲಿನ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಅವರು ಮೃತಪಟ್ಟಿದ್ದು,ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ  ವರುಣಾ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವರುಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: