ಸುದ್ದಿ ಸಂಕ್ಷಿಪ್ತ

ಕನ್ನಡ ರಾಜ್ಯೋತ್ಸವ ಸಮಾರಂಭ ಮತ್ತು ಗಣ್ಯರಿಗೆ ಸನ್ಮಾನ ಸಮಾರಂಭ

ಕನ್ನಡ ರಾಜ್ಯೋತ್ಸವದ  ಅಂಗವಾಗಿ ಸರಸ್ವತಿಪುರಂನ ಕೆ.ಜವರೇಗೌಡ ಉದ್ಯಾನವನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ನ.20 ರಂದು ಬೆ.8 ಗಂಟೆಗೆ 20 ನೇ ವಾರ್ಡಿನ ಮಕ್ಕಳಿಗಾಗಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಮ.2.30 ಕ್ಕೆ ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು, ಸಂಜೆ 5 ಗಂಟೆಗೆ ವಾರ್ಡಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 6 ಗಂಟೆಗೆ ಮೈಸೂರಿನ ಪ್ರಖ್ಯಾತ ಪ್ರೊ.ಕೃಷ್ಣೇಗೌಡ ಮತ್ತು ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಮತ್ತು ಗಣ್ಯರಿಗೆ ಸನ್ಮಾನ  ಸಮಾರಂಭವನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ವಿವಿಯ ನಿವೃತ್ತ ಅಧಿಕಾರಿ ಕೆ.ಟಿ.ವೀರಪ್ಪ ವಹಿಸಲಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಸಹಾಯಕ  ಆಯುಕ್ತ ಗೋವಿಂದಪ್ಪ ಉದ್ಘಾಟನೆ ಮಾಡಲಿದ್ದಾರೆ.

ನ. 21 ರಂದು ಸಂಜೆ 5 ಗಂಟೆಗೆ ಮೈಸೂರಿನ ಪ್ರಪ್ರಥಮ ಮಹಿಳಾ ಜಾದು ಕಲಾವಿದೆ ಸುಮ ರಾಜ್ ಕುಮಾರ್ ಅವರಿಂದ ಮ್ಯಾಜಿಕ್ ಶೋ ಮತ್ತು ಮಾತನಾಡುವ ಗೊಂಬೆ  ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 6.30 ಕ್ಕೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳ ವಿತರಣೆ, ಗಣ್ಯರಿಗೆ ಸನ್ಮಾನ ಹಾಗೂ ಲಕ್ಕಿ ಡಿಪ್ ಡ್ರಾ ಕಾರ್ಯಕ್ರಮಗಳು ನಡೆಯಲಿವೆ.

ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದ ಶ್ರೀ ಭಾಷ್ಯಂ ಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Related Articles

error: