ಕರ್ನಾಟಕ

ನೂರಾರು ಕೋಟಿ ರೂ.ವೆಚ್ಚದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ದಿಪಡಿಸಿದ್ದೇನೆ : ಶಾಸಕ ಕೆ.ಎಸ್.ಪುಟ್ಟಣ್ಣಯ್ಯ

ರಾಜ್ಯ(ಮಂಡ್ಯ)ಜ.17:- ನನ್ನ ಅಧಿಕಾರದ ಅವಧಿಯಲ್ಲಿ ನೂರಾರು ಕೋಟಿ ರೂ.ವೆಚ್ಚದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ದಿಪಡಿಸಿದ್ದೇನೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.

ಪಾಂಟವಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯ 5054 ಓಆರ್‍ಎಫ್-ಎಂಡಿಆರ್ ಯೋಜನೆಯ 8.75 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ನಾನು ಕ್ಷೇತ್ರದ ಶಾಸಕನಾದ ಬಳಿಕ ಗ್ರಾಮೀಣ ರಸ್ತೆಗಳನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದೇನೆ. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಹಲವಾರು ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಇದೀಗ ಕಳೆದ ಹಲವು ವರ್ಷದಿಂದ ಗುಂಡಿಬಿದ್ದು ದುರಸ್ಥಿಗೊಂಡಿದ್ದ ತಾಲೂಕಿನ ಕೆ.ಬೆಟ್ಟಹಳ್ಳಿಯಿಂದ ಪಾಂಡವಪುರ ಪಟ್ಟಣ ಸಂಪರ್ಕಿಸುವ ರಸ್ತೆಯನ್ನು ಅಂದಾಜು 2.80 ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಲು ಗುದ್ದಲಿ ಪೂಜೆ ನೆರವೇರಿಸಿದ್ದೇನೆ. ಈ ರಸ್ತೆಗಳ ಅಭಿವೃದ್ದಿಗೆ ಸಾಕಷ್ಟು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಕಳೆದ ಹಲವಾರು ವರ್ಷಗಳಿಂದ ಸ್ಥಗಿತಗೊಂಡಿರುವ ತಾಲೂಕಿನ ಕೆರೆತೊಣ್ಣೂರು ಕೆರೆಯ ಬಲ ದಂಡೆ ನಾಲೆಯ ಅಭಿವೃದ್ದಿ ಕಾಮಗಾರಿಗೂ ಶೀಘ್ರವೇ ಗುದ್ದಲಿ ಪೂಜೆ ನೆರವೇರಿಸಲಾಗುವುದು. ಕೆರೆ ಭರ್ತಿಯಾದ ನಂತರ ಹೆಚ್ಚುವರಿಯಾಗಿ ಬರುವ ನೀರನ್ನು ಬಳಕೆ ಮಾಡಿಕೊಳ್ಳಲು ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಜತೆಗೆ ತಾಲೂಕಿನ ದಾಸನಕಟ್ಟೆ ಕೆರೆ ಅಭಿವೃದ್ಧಿಗೆ ನೀಲಿ ನಕ್ಷೆ ತಯಾರು ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೆರೆಯ ಅಭಿವೃದ್ದಿ ಕುರಿತು ಶೀಘ್ರವೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮುಂದಿನ ಬಜೆಟ್‍ನಲ್ಲಿ ಈ ಯೋಜನೆಗೆ ಹಣ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ತಾಲೂಕಿನ ಜಯಂತಿನಗರ ಬಳಿ ಹಾದು ಹೋಗುವ ಶ್ರೀರಂಗಪಟ್ಟಣ-ಅರಸೀಕೆರೆ ರಸ್ತೆಯ ಆರುತಿ ಉಕ್ಕಡ ಗೇಟ್‍ನಿಂದ ಉಕ್ಕಡದ ಶ್ರೀ ಅಹಲ್ಯಾದೇವಿ ದೇವಸ್ಥಾನ ಸಂಪರ್ಕಿಸುವ ರಸ್ತೆಯನ್ನು 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ, ಅಂದಾಜು 2.80 ಕೋಟಿ ರೂ. ವೆಚ್ಚದಲ್ಲಿ ಕೆ.ಬೆಟ್ಟಹಳ್ಳಿ ಗ್ರಾಮದಲ್ಲಿ ಕೆ.ಬೆಟ್ಟಹಳ್ಳಿ-ಪಾಂಡವಪುರ ಪಟ್ಟಣ ಸಂಪರ್ಕಿಸುವ ರಸ್ತೆ ಅಭಿವೃದ್ಧಿ, ಎರೆಗೌಡನಹಳ್ಳಿ ಗ್ರಾಮದಲ್ಲಿ ಅಂದಾಜು 2.95 ಕೋಟಿ ವೆಚ್ಚದಲ್ಲಿ ಎರೇಗೌಡನಹಳ್ಳಿ ಯಿಂದ ನಾಗಮಂಗಲ ಮುಖ್ಯರಸ್ತೆ ಸಂಪರ್ಕಿಸುವ ರಸ್ತೆ ಅಭಿವೃದ್ದಿಗೆ ಹಾಗೂ ಚಿಟ್ಟನಹಳ್ಳಿ ಗ್ರಾಮದಲ್ಲಿ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಚಿಟ್ಟನಹಳ್ಳಿ ಯಿಂದ ಮೇಲುಕೋಟೆ ಸಂಪರ್ಕಿಸುವ ರಸ್ತೆ ಅಭಿವೃದ್ದಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಪಿಡಬ್ಲ್ಯೂಡಿ ಎಇಇ ಎಂ.ಬಿ.ರಾಜು, ಎಇಗಳಾದ ಲೋಕೇಶ್, ಪುಟ್ಟರಾಜು, ನಂಜಪ್ಪಚಾರ್, ಮುಖಂಡರಾದ ಹೊಸಕೋಟೆ ವಿಜಯಕುಮಾರ್, ಬಿ.ಟಿ.ಶಿವಣ್ಣ, ಮಾಕೇಗೌಡ, ಆನಂದ, ಚಂದ್ರಶೇಖರ್, ಕೆಂಪೇಗೌಡ, ಕೃಷ್ಣೇಗೌಡ, ಶಿವರಾಮೇಗೌಡ, ಚಿಟ್ಟನಹಳ್ಳಿ ಮಹೇಶ್, ವೀರಭದ್ರಪ್ಪ, ಸಿದ್ದೇಗೌಡ, ನಾಗರಾಜು, ವೆಂಕಟಸ್ವಾಮೀಗೌಡ, ಪರಶುರಾಮು, ಕೆಂಪೇಗೌಡ, ಜವರೇಗೌಡ ಸೇರಿದಂತೆ ಹಲವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: