ಸುದ್ದಿ ಸಂಕ್ಷಿಪ್ತ
ನ.23 ರಂದು ಗಾನಭಾರತಿಯಲ್ಲಿ ಕಾರ್ಯಾಗಾರ
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಯಮಿತ ಸಂಸ್ಥೆಯು ಪಿ.ಸಿ.ಆರ್.ಎ., ಮತ್ತು ವಿವಿಧ ಮಹಿಳಾ ಸಂಘಗಳ ಜೊತೆಗೂಡಿ ‘ಗೃಹ ಬಳಕೆ ಕ್ಷೇತ್ರದಲ್ಲಿ ಎಲ್.ಪಿ.ಜಿ. ಗ್ಯಾಸ್ ನ ಸದ್ಭಳಕೆ, ವಿದ್ಯುತ್ ಉಳಿತಾಯ ಮತ್ತು ಸೌರಶಕ್ತಿಯ ಬಳಕೆ’ ಕುರಿತಾದ ಕಾರ್ಯಾಗಾರವನ್ನು ಏರ್ಪಡಿಸಿದೆ.
ನ.23 ರಂದು ಗಾನಭಾರತಿಯಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಆಸಕ್ತರು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬೇಕಾಗಿದೆ. ಯಾವುದೇ ಭಾಗವಹಿಸುವಿಕೆಯ ಶುಲ್ಕ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ 9480691046/ 0821-2421046 ಗೆ ಸಂಪರ್ಕಿಸಬಹುದಾಗಿದೆ.