ದೇಶಪ್ರಮುಖ ಸುದ್ದಿಮೈಸೂರು

ನೋಟು ಬದಲಾವಣೆಗೆ ಡಿ.30 ರ ವರೆಗೆ ಅವಧಿ ವಿಸ್ತರಣೆ

ನೋಟು ಬದಲಾವಣೆ ಅವಧಿಯನ್ನು ಆರ್.ಬಿ.ಐ. ಡಿಸೆಂಬರ್ 30 ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ನ.24 ರ ವರೆಗೆ ಇದ್ದ ಅವಧಿಯನ್ನು ಡಿ.30ರವರೆಗೆ ವಿಸ್ತರಿಸಿರುವುದರಿಂದ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ. ನೋಟು ಬದಲಾವಣೆಗಾಗಿ ದೇಶದ ಜನರು ಪಡಿಪಾಟಲು ಪಡುತ್ತಿರುವುದನ್ನು ಮನಗಂಡ ಆರ್.ಬಿ.ಐ. ಈ ನಿರ್ಧಾರಕ್ಕೆ ಬಂದಿದೆ.

ಒಬ್ಬರಿಗೆ ಎರಡು ಸಾವಿರ ಮಾತ್ರ ಎನ್ನುವ ಮಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅವಧಿ ವಿಸ್ತರಣೆ ಬಗ್ಗೆ ಖಾಸಗಿ ಬ್ಯಾಂಕ್‍, ಗ್ರಾಮೀಣ ಬ್ಯಾಂಕ್‍, ನಗರ ಮತ್ತು ರಾಜ್ಯಗಳ ಸಹಕಾರಿ ಬ್ಯಾಂಕ್‍ ಅಧ್ಯಕ್ಷರುಗಳಿಗೆ ಆರ್‍ಬಿಐ ನಿರ್ದೇಶನ ನೀಡಿದೆ.

Leave a Reply

comments

Related Articles

error: