ಮೈಸೂರು

ಸಂಚಾರ ಪೊಲೀಸರಿಂದ “ಆಪರೇಷನ್ ಡಿಕಾಯ್”:ಹೆಚ್ಚು ಬಾಡಿಗೆಗೆ ಒತ್ತಾಯ ಮತ್ತು ಬಾಡಿಗೆ ಬರಲು ನಿರಾಕರಣೆ ಮಾಡಿದ ಆಟೋ ರಿಕ್ಷಾಗಳ ವಿರುದ್ದ ಕ್ರಮ

ಮೈಸೂರು,ಜ.17:- ಮೈಸೂರು ನಗರದಲ್ಲಿ ಆಟೋ ರಿಕ್ಷಾ ಚಾಲಕರು ಸಾರ್ವಜನಿಕರು ಕರೆದ ಕಡೆ ಬಾಡಿಗೆಗೆ ಬಾರದೇ ಇರುವುದು ಹಾಗೂ ಹೆಚ್ಚಿನ ಬಾಡಿಗೆಗೆ ಒತ್ತಾಯಪಡಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಅನೇಕ ಅಹವಾಲುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜ. 16-01-2018 ರಂದು ಪೊಲೀಸರು “ಆಪರೇಷನ್ ಡಿಕಾಯ್” ಕಾರ್ಯಾಚರಣೆ ನಡೆಸಿ ಪೊಲೀಸರು ಸಾರ್ವಜನಿಕರಂತೆ ವರ್ತಿಸಿ ಆಟೋಗಳನ್ನು ಬಾಡಿಗೆ ಕೇಳುವಂತೆ ನಟಿಸಿ ಯಾವ ಆಟೋ ರಿಕ್ಷಾದವರು ಕರೆದಲ್ಲಿಗೆ ಬಾಡಿಗೆ ಬರಲು ಒಪ್ಪದಿರುವುದು ಹಾಗೂ ಹೆಚ್ಚಿನ ಬಾಡಿಗೆಗೆ ಒತ್ತಾಯಿಸಿದ 49 ಆಟೋ ಚಾಲಕರ ವಿರುದ್ದ ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿದ್ದಾರೆ.

ಆಟೋ ಚಾಲಕರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲು ಆರ್.ಟಿ.ಓ. ಕಛೇರಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರು ನಗರದ ಸಂಚಾರ ವಿಭಾಗದ ಡಿ.ಸಿ.ಪಿ. ಡಾ.ವಿಕ್ರಂ ವಿ ಅಮಟೆ ಅವರ ಮಾರ್ಗರ್ದಶನದಲ್ಲಿ ನರಸಿಂಹರಾಜ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಆರ್.ಪಿ. ಅಶೋಕ್ (ಪ್ರಭಾರ), ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಸಿ.ವಿ. ರವಿ. ಇತರೇ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ತಮ್ಮ ಠಾಣಾ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಈ ಕಾರ್ಯಾಚರಣೆಯನ್ನು ಕೈಗೊಂಡಿದ್ದರು. ಹೆಚ್ಚು ಬಾಡಿಗೆಗೆ ಒತ್ತಾಯ ಮತ್ತು ಬಾಡಿಗೆ ಬರಲು ನಿರಾಕರಣೆ ಮಾಡಿದ ಆಟೋ ರಿಕ್ಷಾಗಳ ವಿರುದ್ಧ ಆಪರೇಷನ್ ಡಿಕಾಯ್ ಕಾರ್ಯಾಚರಣೆಯನ್ನು ಇನ್ನೂ ಮುಂದೆಯೂ ಸಹ ಮುಂದುವರಿಸಲಿದ್ದು, ಆಟೋ ಚಾಲಕರು ಸಾರ್ವಜನಿಕರು ಕರೆದ ಸ್ಥಳಗಳಿಗೆ ಬಾಡಿಗೆಗೆ ಹೋಗುವುದು ಹಾಗೂ ನಿಗದಿತ ಬಾಡಿಗೆಯನ್ನು ಪಡೆಯಬೇಕೆಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: