ಪ್ರಮುಖ ಸುದ್ದಿಮೈಸೂರು

ಕಸಾಯಿಖಾನೆಗೆ ಸಾಗಿಸುತ್ತಿದ್ದ ಎತ್ತುಗಳನ್ನು ಸಾವಿನ ದವಡೆಯಿಂದ ರಕ್ಷಿಸಿದ ಪ್ರತಾಪ್ ಸಿಂಹ

ಮೈಸೂರು, ಜ.18:- ಎತ್ತುಗಳನ್ನು ಕಸಾಯಿಖಾನೆಗೆ ಸಾಗಿಸುವ ವೇಳೆ ಸಿಂಹದಂತೆಯೇ  ಕಾರ್ಯಾಚರಣೆ ನಡೆಸಿ ಎತ್ತುಗಳನ್ನು ಸಾವಿನ ದವಡೆಯಿಂದ ಸಂಸದ ಪ್ರತಾಪ್ ಸಿಂಹ ಪಾರು ಮಾಡಿದ್ದಾರೆ.

ಸಂಸದ ಪ್ರತಾಪ್ ಸಿಂಹ   ತಡರಾತ್ರಿ  ಅಕ್ರಮವಾಗಿ ಸಾಗಿಸುತ್ತಿದ್ದ ಎತ್ತುಗಳನ್ನು ರಕ್ಷಣೆ ಮಾಡಿದ್ದಾರೆ. ಚಿತ್ರದುರ್ಗ ಸಮೀಪದ ಐಮಂಗಲ ಬಳಿ ಕುಷ್ಠಗಿ ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಮಧ್ಯರಾತ್ರಿ ಊಟಕ್ಕೆ ಡಾಬ ಬಳಿ ಕಾರು ನಿಲ್ಲಿಸಿದಾಗ ಪ್ರಕರಣ ಬಯಲಾಗಿದೆ. ಟೆಂಪೋವೊಂದರಲ್ಲಿ 16 ಎತ್ತುಗಳನ್ನು  ಯಾವುದೇ ಪರವಾನಗಿ ಇಲ್ಲದೆ ಎತ್ತುಗಳನ್ನು ಸಾಗಿಸಲಾಗುತ್ತಿತ್ತು. ವಾಹನವನ್ನು ಮುಚ್ಚಿ ಅನುಮಾನಾಸ್ಪದವಾಗಿ ಎತ್ತುಗಳನ್ನು ಸಾಗಿಸಲಾಗುತ್ತಿತ್ತು. ಅನುಮಾನ ಬಂದ ಸಂಸದ ಪ್ರತಾಪ್ ಸಿಂಹ  ಡ್ರೈವರ್ ನ್ನು ವಿಚಾರಿಸಿದರು. ಚಾಲಕ ಬಡಬಡಿಸಿ ಏನೇನೋ ಉತ್ತರ ನೀಡಿ, ಸಂಸದರ ಮೇಲೆಯೇ ಪ್ರಭಾವ ಬೀರಲು ಮುಂದಾದ. ಅವರಿವರಿಗೆ ಕರೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಪ್ರತಾಪ್ ಸಿಂಹ ಸಂಸದರು ಎಂದು ಗೊತ್ತಾಗುತ್ತಿದ್ದಂತೆ ಚಾಲಕ ತಟಸ್ಥನಾದ. ಸ್ಥಳೀಯ ಎಸ್.ಪಿ‌ಗೆ  ಸಂಸದರು ಮಧ್ಯರಾತ್ರಿಯೇ ಮಾಹಿತಿ ನೀಡಿದರು. ಸ್ಥಳೀಯ ಪೊಲೀಸರು ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದರು.ಎತ್ತುಗಳನ್ನು  ರಕ್ಷಿಸಿ ಮೈಸೂರಿನತ್ತ ಹೆಜ್ಜೆ ಹಾಕಿದ್ದು, ಮಧ್ಯರಾತ್ರಿಯೇ ಫೇಸ್‌ಬುಕ್ ಲೈವ್ ಮೂಲಕ ಪ್ರಕರಣ ಬೆಳಕಿಗೆ ತಂದಿದ್ದಾರೆ. ಲಕ್ಷಾಂತರ ಮಂದಿಯಿಂದ ಸಂಸದರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: