ಮೈಸೂರು

ಅಪರಿಚಿತ ವಾಹನ ಡಿಕ್ಕಿ : ಬೈಕ್ ಸವಾರ ಸಾವು

ಮೈಸೂರು,ಜ.18:- ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬನ್ನೂರು ರಸ್ತೆ ವಿದ್ಯಾಜ್ಯೋತಿ ಶಾಲೆ ಮುಂಭಾಗದಲ್ಲಿ ನಡೆದಿದೆ.

ಮೃತನನ್ನು ಮೈಸೂರು ತಾಲೂಕು ಸುಬ್ಬನಹಳ್ಳಿ  ನಿವಾಸಿ,ಕೆ.ಎಂ.ಎಫ್ ನೌಕರ ಯೋಗೇಶ್ (25)  ಎಂದು ಗುರುತಿಸಲಾಗಿದೆ. ಮುಂಜಾನೆ ಕೆಲಸಕ್ಕೆ ಹೋಗುವ ವೇಳೆ ಬನ್ನೂರು ರಸ್ತೆ ವಿದ್ಯಾಜ್ಯೋತಿ ಶಾಲೆ ಮುಂಭಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು  ಶವಾಗಾರಕ್ಕೆ ರವಾನೆ ಮಾಡಲಾಗಿದ್ದು,ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: