ಪ್ರಮುಖ ಸುದ್ದಿಮೈಸೂರು

ಆರ್‍ಎಸ್‍ಎಸ್ ಮುಖಂಡ ಕೃ. ಸೂರ್ಯನಾರಾಯಣ ರಾವ್ ನಿಧನ: ಪ್ರಧಾನಿ ಮೋದಿ ಸಂತಾಪ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಹಾಗೂ ಪ್ರಚಾರಕ ಕೃ. ಸೂರ್ಯನಾರಾಯಣ ರಾವ್ (93) ಅವರು ವಿಧಿವಶರಾಗಿದ್ದಾರೆ.

ಅನಾರೋಗ್ಯದ ಕಾರಣ ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬೆಂಗಳೂರಿನ ಸಾಗರ್ ಅಪೋಲೋ ಅಸ್ಪತ್ರೆಯಲ್ಲಿ ನ.18 ಶುಕ್ರವಾರ ಮಧ್ಯರಾತ್ರಿ 11:30ಕ್ಕೆ ಮೃತಪಟ್ಟರು ಎಂದು ತಿಳಿದುಬಂದಿದೆ. ಚಾಮರಾಜಪೇಟೆಯ ಆರ್.ಎಸ್.ಎಸ್. ಕೇಂದ್ರ ಕಚೇರಿ “ಕೇಶವ ಕೃಪಾ”ದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನ.19 ಶನಿವಾರ ಸಂಜೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮೂಲತಃ ಮೈಸೂರಿನವರೇ ಆದ ಅವರು ಸಂಘ ಪರಿವಾರದಲ್ಲಿ ಸೂರ್ಯಜೀ ಎಂದೇ ಖ್ಯಾತಿ ಹೊಂದಿದ್ದರು. 70 ವರ್ಷಗಳಿಂದಲೂ ಆರ್.ಎಸ್.ಎಸ್. ಪ್ರಚಾರಕರಾಗಿ ಸೇವೆಗೈಯದಿದ್ದಾರೆ.

ಕೃ. ಸೂರ್ಯನಾರಾಯಣ ರಾವ್ ಅವರ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವಿಟ್ ಮಾಡಿ ತೀವ್ರ ಸಂತಾಪ ಸೂಚಿಸಿದ್ದಾರೆ.

Leave a Reply

comments

Related Articles

error: