ಸುದ್ದಿ ಸಂಕ್ಷಿಪ್ತ
ತಪಾಸಣೆ ಶಿಬಿರ
ಜೆಎಸ್ಎಸ್ ವಾಕ್ ಶ್ರವಣ ಸಂಸ್ಥೆ, ಜೆಎಸ್ಎಸ್ ಆಸ್ಪತ್ರೆ ಮತ್ತು ಅಲಿ ಯಾವರ್ ಜಂಗ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಪೀಚ್ ಅಂಡ್ ಹಿಯರಿಂಗ್ ಡಿಸೆಬಿಲಿಟೀಸ್ ಮುಂಬೈ ಸಹಯೋಗದೊಂದಿಗೆ ನ.20ರಂದು ಸಂಜೆ 4 ಗಂಟೆಗೆ ಎಂ.ಜಿ.ರಸ್ತೆಯಲ್ಲಿರುವ ರಾಜೇಂದ್ರ ಭವನದಲ್ಲಿ ಉಚಿತ ಕಿವುಡು ತಪಾಸಣೆ ಮತ್ತು ಶ್ರವಣೋಪಕರಣ ವಿತರಣಾ ಶಿಬಿರ ಆಯೋಜಿಸಲಾಗಿದೆ. ಎನ್ಆರ್ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ಆರ್. ಗುರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಜೆಎಸ್ಎಸ್ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಆರ್. ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.