ಮೈಸೂರು

ನಯನ ಮನೋಹರ ಯುರೋಪ್ ಹಾಗೂ ಕರ್ನಾಟಕ ಜಾನಪದ ನೃತ್ಯ ಸಂಭ್ರಮ

ಮೈಸೂರು, ಜ.18:- ಐಸಿಸಿಆರ್, ವಿದೇಶಾಂಗ ಸಚಿವಾಲಯ, ಆರ್ಟಿಕ್ಯುಲೇಟ್ ಫೆಸ್ಟಿವಲ್, ಮೈಸೂರು ಮತ್ತು ವಿದ್ಯಾವಿಕಾಸ್ ಶೈಕ್ಷಣಿಕ ಸಮಿತಿ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಲಿಥುವೇನಿಯಾ ಮತ್ತು ಕರ್ನಾಟಕ ಜಾನಪದ ಸಂಗೀತ ಮತ್ತು ನೃತ್ಯ ಸಂಪ್ರದಾಯಗಳನ್ನು ಇತ್ತೀಚೆಗೆ ನಗರದ ಪ್ರೀಮಿಯರ್ ಸ್ಟುಡಿಯೋ ಸಭಾಂಗಣದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ಮೊದಲ ಹಂತದಲ್ಲಿ ಯುರೋಪಿನ ತಂಡದಿಂದ ಜಾನಪದ ಶೈಲಿಯ ನೃತ್ಯಕಾರ್ಯಕ್ರಮ ಬಹಳ ನೈಜವಾಗಿ ಮೂಡಿಬಂತು. ಮತ್ತುಎರಡನೇ ಹಂತದಲ್ಲಿ ಕರ್ನಾಟಕ ಜಾನಪದ ವರ್ಣರಂಜಿತವಾಗಿತ್ತು. ಲಿಥುವೇನಿಯಾದ ರೆಟಿಲಿಯೋ ಮತ್ತು ಕರ್ನಾಟಕದ ಆದಿ ದ್ರಾವಿಡ ಸಂಸ್ಕೃತಿ ಕಲಾ ತಂಡಗಳು ಬಹಳ ವಿಶಿಷ್ಠವಾಗಿತ್ತು. ವಿಶೇಷವಾದ ವಿಚಾರ ಎಂದರೆ,ರೆಟಿಲಿಯೋತಂಡ ವಿಲ್ನಿಯಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಒಳಗೊಂಡು ಜಾನಪದ ಸಂಪ್ರದಾಯಗಳನ್ನು ಕಲಿತರು. ಕರ್ನಾಟಕದಲ್ಲಿ ಆದಿ ದ್ರಾವಿಡ ತಂಡ, ಪೌರಕಾರ್ಮಿಕರ ಮಕ್ಕಳು, ಮೈಸೂರು ಇವರುಗಳನ್ನು ಒಂದುಗೂಡಿಸಿ ಅವರಿಗೆ ಜಾನಪದತರಬೇತಿ ನೀಡಲಾಗಿತ್ತು. ಈ ಕಾರ್ಯಕ್ರಮ ಎಲ್ಲರ ಮನಸ್ಸನ್ನು ಸೂರೆಗೊಂಡಿತು.

ರೆಟಿಲಿಯೋ ಎಂದರೆ ವೃತ್ತ ಎಂದರ್ಥ, ನಮ್ಮಲ್ಲಿ ರಾಸ್‍ಎಂದರೆ ವೃತ್ತ. ಆ ಜಾನಪದ ಕಲೆಯ ಸಂಪ್ರದಾಯಗಳು ಬಹಳ ರಂಜನೀಯ ಹಾಗೂ ಆ ಎಲ್ಲಾ ಕಾರ್ಯಕ್ರಮಗಳು ಮುಖ್ಯವಾಗಿ ವೃತ್ತದ ಶೈಲಿಯಲ್ಲಿಯೇ ನಡೆಯಿತು. ಅಲ್ಲಿನ ಕಲಾವಿದರು ಹೆಚ್ಚು ತರಬೇತಿ ಹೊಂದಿದವರಲ್ಲ. ಅವರ ಆಸಕ್ತಿ ಮತ್ತು ಅನುಭವದ ಸಂಕೇತ. ರೆಟಿಲಿಯೋ ದೇಶದವರು ಕರಡಿ ಮತ್ತು ಮೇಕೆಗಳಿಂದ ಪ್ರೇರಣೆ ಪಡೆದು, ಅತಿ ಸರಳವಾದ ಸಾಧನಗಳನ್ನು ಬಳಸಿ ಅವರದೇ ಆದ ಶೈಲಿಯಲ್ಲಿ ಜಾನಪದ ನೃತ್ಯ ಕಾರ್ಯಕ್ರಮ ನೀಡಿದರು. ಆದಿ ದ್ರಾವಿಡ ಗುಂಪು ತಮ್ಮ ಸಾಮಾನ್ಯ ಜೀವನದ ಒಳಗೆ ಬೆರೆತು ಗೀತ ನೃತ್ಯ ಸಾದರಪಡಿಸಿದರು. ಇಲ್ಲಿಯ ಕಲಾವೈಭವದಿಂದ ಜನಸ್ತೋಮ ಬೆರಗುಗೊಂಡಿತು.

ರೆಟಿಲಿಯೋ ಗುಂಪು ತನ್ನದೇಆದ ಶೈಲಿಯ ಉಡುಪು ಧರಿಸಿ, ವೇದಿಕೆಗೆ ಆಗಮಿಸಿ ನೃತ್ಯ ಮತ್ತು ಸಂಗೀತದ ನಡುವೆ ಮಧುರ ಸ್ಪಂದನವನ್ನು ಚಿಮ್ಮಿಸಿತು. ಆದಿ ದ್ರಾವಿಡ ಜಾನಪದ ಶೈಲಿ ಮೂಕಪ್ರೇಕ್ಷಕರನ್ನಾಗಿಸಿತು.  ಐಸಿಸಿಆರ್ ನಿರ್ದೇಶಕರು ವೇಣುಗೋಪಾಲ್, ಶ್ರೀನಿವಾಸ ಕಪ್ಪಣ್ಣ, ಪೌರಕಾರ್ಮಿಕರ ಮಕ್ಕಳನ್ನು ಮಾರ್ಗದರ್ಶಿಸಿದರು. ಆರ್ಟಿಕ್ಯುಲೇಟ್ ಫೆಸ್ಟಿವಲ್ ಸಂಯೋಜಕ ಮೈಸೂರು ಬಿ.ನಾಗರಾಜ್‍ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: