Uncategorizedಪ್ರಮುಖ ಸುದ್ದಿಮೈಸೂರು

ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು : ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು,ಜ.18:- ಜನವರಿ 13 ರಿಂದ 18 ರವರೆಗೆ ಸುತ್ತೂರಿನಲ್ಲಿ 6 ದಿನಗಳ ಕಾಲ ನಡೆದ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಇಂದು ಅದ್ಧೂರಿ ತೆರೆ ಬಿದ್ದಂತಾಗಿದೆ.

ಸುತ್ತೂರಿನ ಜಾತ್ರಾ ಮಹೋತ್ಸವದ ಸಮರೋಪ ಸಮಾರಂಭದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಜೆ ಎಸ್ ಎಸ್ ಜ್ಞಾನ ಸಂಪನ್ಮೂಲ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮಾದರಿ ತಯಾರಿಕೆ ಕೇಂದ್ರವನ್ನು ಉದ್ಘಾಟಿಸಿದರು. ನಂತರ ಹೆಬ್ಬೆಟ್ ರಾಮಕ್ಕ ಸಿಡಿ ಬಿಡುಗಡೆ ಮಾಡಿದರು. ಇದೇ ವೇಳೆ ಕೃಷಿ ಮೇಳ,ವಸ್ತು ಪ್ರದರ್ಶನ ಮತ್ತು ಸಾಂಸ್ಕೃತಿಕ ಮೇಳದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತ್ರೆ ಎಂದರೇ ಭಾವೈಕ್ಯತೆಯ ರೂಪ. ಸಮಾಜದಲ್ಲಿ ಭಾವೈಕ್ಯತೆ ಇರಬೇಕು.ಅದಕ್ಕೆ ನಮ್ಮ ಸಂವಿಧಾನದಲ್ಲಿ ಒತ್ತು ಕೊಟ್ಟಿದ್ದಾರೆ.ಭಾರತ ಒಂದು ವಿಶಿಷ್ಟವಾದ ದೇಶ. ಒಂದು ಕಡೆ  ಕುವೆಂಪು ಪ್ರತಿಯೊಂದು ಮಗು ಕೂಡ  ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುತ್ತಾನೆ ಎಂದಿದ್ದಾರೆ. ಬೆಳೆಯುತ್ತಾ ಬೆಳೆಯುತ್ತಾ ಅಲ್ಪ ಮಾನವನಾಗುತ್ತಿದ್ದಾನೆ. ನಾವು ವಿಶ್ವಮಾನವರಾಗಲು ಪ್ರಯತ್ನಿಸಿದರೆ ಸಮಾಜದ ಆಸ್ತಿ ಆಗುತ್ತೇವೆ. ಅಲ್ಪ ಮಾನವರಾದರೆ ಸಮಾಜಕ್ಕೆ ಭಾರವಾಗುತ್ತೇವೆ. ನಾವು ಎಲ್ಲಾ ಧರ್ಮದ ಆಚರಣೆಯಲ್ಲಿ ನಾಡಗೀತೆ ಹಾಡುತ್ತೇವೆ. ಈ ಸಮಾಜ ಸರ್ವ ಜನಾಂಗದ ಶಾಂತಿಯ ತೋಟ. ಆದರೆ, ಅದನ್ನು ನಾವು ಉಳಿಸಿಕೊಳ್ಳುತ್ತಿಲ್ಲ. ಇದು ನಿಜಕ್ಕೂ ಅಮಾನವೀಯ ಎಂದು ಭಾವಿಸುತ್ತೇನೆ. ಜಾತ್ರೆ ಎಂಬ ಉದ್ದೇಶವನ್ನು ಇಟ್ಟುಕೊಂಡು ಎಲ್ಲರನ್ನೂ ತಲುಪಲು ಈ ಕ್ಷೇತ್ರ ಇಂತಹ ಜಾತ್ರೆಯನ್ನು ಮಾಡುತ್ತಾ ಬಂದಿದೆ. ಪರಿಣಾಮಏನೆಂದರೆ ಜಾತ್ರೆಯಲ್ಲಿ ಭಾಗವಹಿಸುವುದರ ಜೊತೆಗೆ ನನಗೆ ವೈಯುಕ್ತಿಕ ಲಾಭವಾಗಿದೆ. ಧರ್ಮದ ಕುರಿತು ಬಸವಣ್ಣ ಸರಳವಾಗಿ ಹೇಳಿದ್ದಾರೆ. ದಯೆಯೇ ಧರ್ಮದ ಮೂಲವಯ್ಯ ಎಂದಿದ್ದಾರೆ. ದಯೆ ಇಲ್ಲದವ ಮನುಷ್ಯನೇ ಅಲ್ಲ. ನಮಗೋಸ್ಕರ ಧರ್ಮ ಇರುವುದು. ಮನುಷ್ಯ – ಮನುಷ್ಯನ ನಡುವೆ ಸಂಬಂಧ ಪರಸ್ಪರ ಪ್ರೀತಿ ಇರುವಂತಿರಬೇಕು. ಆದರೆ, ಇತ್ತೀಚೆಗೆ ಆ ಪ್ರೀತಿ ಮಾಯವಾಗಿ ದ್ವೇಷ ಬೆಳೆಯುತ್ತಿದೆ.ಅಂತಹ ದ್ವೇಷ ಬಿತ್ತುವವರಿಂದ ಎಚ್ಚರಿಕೆಯಿಂದಿರಬೇಕು. ದಯೆಯಿಂದ ನಾವೆಲ್ಲ ಇದ್ದರೆ ಪ್ರೀತಿ, ವಿಶ್ವಾಸ, ನಂಬಿಕೆ ಇರುತ್ತದೆ. ಧರ್ಮ ಧರ್ಮಗಳಲ್ಲಿ ರಾಜಕೀಯ ಮಾಡುವುದು. ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು. ಧರ್ಮ ಧರ್ಮವಾಗಿಯೇ ಉಳಿಯಬೇಕು.ಇದು ನನ್ನ ಕ್ಷೇತ್ರ, ಜಿಲ್ಲೆಯ ಎಲ್ಲಾ ಜನರು ಇದ್ದಾರೆ.ನಿಮ್ಮೆಲ್ಲರ ಆಶೀರ್ವಾದದಿಂದಲೇ ನನಗೆ ಈ ಅಧಿಕಾರ ಸಿಕ್ಕಿದ್ದು. ಜನರ ನಿರೀಕ್ಷೆಗೆ ತಕ್ಕಂತೆ ನಾನು ನಡೆದುಕೊಂಡಿದ್ದೇನೆ.ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ತಿಳಿಸಿದರು.

ಈ ಸಂದರ್ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಹೆಚ್.ಕೆ.ಪಾಟೀಲ್, ಡಾ.ಗೀತಾ ಮಹದೇವಪ್ರಸಾದ್, ತನ್ವೀರ್ ಸೇಠ್,ಸಂಸದ ಧ್ರುವ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: