ಸುದ್ದಿ ಸಂಕ್ಷಿಪ್ತ

ಕೃತಿಗಳ ಲೋಕಾರ್ಪಣೆ ಸಮಾರಂಭ

ಕರ್ನಾಟಕ ರತ್ನ ದೇಜಗೌ ಶ್ರೀಸಾಮಾನ್ಯ ಸಾಹಿತ್ಯ ಮಾಲೆ ಪ್ರಕಟಿಸಿರುವ ನಾಡಿನ ಹಿರಿಯ ಸಾಹಿತಿ ಡಾ.ಸಿ.ಪಿ.ಕೆ. ವಿರಚಿತ ಭಗವದ್ಗೀತೆ ಜಗದ ಭಾಗ್ಯ, ಸ್ವಾಮಿ ವಿವೇಕಾನಂದ ವಿವೇಚನೆ, ಶ್ರೀ ರಾಮಕೃಷ್ಣ ದರ್ಶನ, ಶ್ರೀ ಶಾರದಾ ಸೌರಭ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ನ.21ರಂದು ಸಂಜೆ 5.30ಕ್ಕೆ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ದಾಸ್ತಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಡಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದು, ನಾಡಿನ ಹಿರಿಯ ಸಾಹಿತಿ ಮತ್ತು ಕೃತಿಗಳ ಲೇಖಕರಾದ ಡಾ.ಸಿ.ಪಿ.ಕೆ. ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಸಾಹಿತಿಗಳಾದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ, ಡಾ.ಕೆ. ಅನಂತರಾಮು ಕೃತಿಗಳನ್ನು ಲೋಕಾರ್ಪಣೆ ಮಾಡುವರು.

Leave a Reply

comments

Related Articles

error: