ಸುದ್ದಿ ಸಂಕ್ಷಿಪ್ತ

ಸುತ್ತೂರು ಜಾತ್ರೆ- ಕೃಷಿಮೇಳ

ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವು ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜ.24ರಿಂದ 29ರವರೆಗೆ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಕೃಷಿಮೇಳವನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಹಾಗೂ ಕೃಷಿ ಪೂರಕ ಉದ್ಯಮಗಳಲ್ಲಿರುವ ನವೀನ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವುದು ಕೃಷಿಮೇಳದ ಉದ್ದೇಶವಾಗಿದೆ.

ಕೃಷಿಮೇಳದಲ್ಲಿ ಸುದಾರಿತ ತಳಿಗಳ ಬಿತ್ತನೆ ಬೀಜ, ತೋಟಗಾರಿಕೆ ಸಸಿಗಳು ಹಾಘೂ ಎರೆಗೊಬ್ಬರ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಅರಣ್ಯ, ಮೀನುಗಾರಿಕೆ, ಜಲಾನಯನ ಅಭಿವೃದ್ಧಿ ಹಾಘೂ ಕೃಷಿ ಮಾರುಕಟ್ಟೆ ಇಲಾಖೆಗಳು, ಕೃಷಿ ಹಾಗೂ ತೋಟಗಾರಿಕೆ ವಿವಿ, ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೃಷಿ ಪರಿಕರಗಳ ಉತ್ಪಾದಕರು ಹಾಗೂ ಖಾಸಗಿ ವಿತರಕರು ಈ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಮಳಿಗೆಗಳನ್ನು ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಚಾಲಕರಾದ ಡಾ.ಅರುಣ್ ಬಳಮಟ್ಟಿ(9986613210), ಶ್ರೀನಿವಾಸ್ ಮಂಕಣಿ(9986613210) ಅಥವಾ ಸುತ್ತೂರಿನ ಜೆಎಸ್‍ಎಸ್‍ ಕೃಷಿ ವಿಜ್ಞಾನ ಕೇಂದ್ರವನ್ನು ನೇರವಾಗಿ ಅಥವಾ 08221-232218 ದೂರವಾಣಿ ಮೂಲಕ ಸಂಪರ್ಕಿಸಬಹುದು.

Leave a Reply

comments

Related Articles

error: