ಮೈಸೂರು

ವಿಜಯನಗರದ ಎರಡನೇ‌ ಹಂತದಲ್ಲಿ ಹತ್ತಕ್ಕೂ ಹೆಚ್ಚು ತಲೆ ಬುರುಡೆ ಪತ್ತೆ

ಮೈಸೂರು,ಜ.19:- ವಿಜಯನಗರದ ಎರಡನೇ‌ ಹಂತದಲ್ಲಿರುವ ಚಿಕ್ಕಮ್ಮಾ ಶಾಲೆಯ ಬಳಿ ತಲೆ ಬುರುಡೆಗಳು ಪತ್ತೆಯಾಗಿವೆ.

ಚಿಕ್ಕಮ್ಮಾ ಶಾಲೆಯ ಬಳಿ ಹತ್ತಕ್ಕೂ ಹೆಚ್ಚು ತಲೆಬುರುಡೆಗಳು ಪತ್ತೆಯಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದರು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಜನರು ಜಮಾಯಿಸಿದ್ದರು. ಯಾರೋ ಶುಕ್ರವಾರ ಬೆಳಿಗ್ಗೆ ಶಾಲೆಯ ಬಳಿ ಹತ್ತಕ್ಕೂ ಹೆಚ್ಚು ತಲೆ ಬುರುಡೆಗಳನ್ನು ಚೀಲದಲ್ಲಿ ತುಂಬಿ ಬಿಸಾಡಿದ್ದರು.  ವಿಜಯನಗರ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಇನ್ಸಪೆಕ್ಟರ್ ಅನಿಲ್, ಸಬ್ ಇನ್ಸಪೆಕ್ಟರ ರಾಘವೇಂದ್ರಕುಮಾರ್, ಸಿಬ್ಬಂದಿಗಳಾದ ಮಹದೇವ್, ಶಂಕರ್ ಮತ್ತಿತರರು ತಪಾಸಣೆ ನಡೆಸಿದರು. ಹೊಲಗಳಲ್ಲಿ ಮನೆಕಟ್ಟಲು ಪಾಯ ತೆಗೆಯುವ ವೇಳೆ ಸಿಕ್ಕಿರಬಹುದು. ಅದನ್ನು ಇಲ್ಲಿ ತಂದು ಬಿಸಾಡಿಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಮುಂದಿನ ವಿಚಾರಣೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: