ದೇಶಪ್ರಮುಖ ಸುದ್ದಿ

ಜಾದವ್ ಅಪಹರಣಕ್ಕೆ ಕೋಟಿ ಕೋಟಿ ವೆಚ್ಚಮಾಡಿದ್ದ ಪಾಕ್.!

ನವದೆಹಲಿ,ಜ.19-ಬೇಹುಗಾರಿಕೆ ಹಾಗೂ ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಭಾರತದ ನೌಕಾಧಿಕಾರಿ ಕುಲಭೂಷಣ್ ಜಾದವ್ ಅವರನ್ನು ಅಪಹರಣ ಮಾಡಲು ಪಾಕಿಸ್ತಾನ ಕೋಟಿ ಕೋಟಿ ಖರ್ಚುಮಾಡಿತ್ತು ಎಂದು ಬಲೂಚ್ ಹೋರಾಟಗಾರ ಮಮ ಖಾದಿರ್ ಆರೋಪಿಸಿದ್ದಾರೆ.

ವಾಹಿನಿಯೊಂದರಲ್ಲಿ ಮಾತನಾಡಿರುವ ಅವರು, ಜಾದವ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇರಲಿಲ್ಲ. ಬದಲಿಗೆ ಇರಾನ್ ನಲ್ಲಿ ಇದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಕುಲಭೂಷಣ್ ಜಾದವ್ ಅಪಹರಣಕ್ಕೆ ಸಂಚು ರೂಪಿಸಿ ಪಾಕಿಸ್ತಾನ ಮೂಲದ ಉಗ್ರ ಒಮರ್ ಮುಲ್ಲಾನೊಂದಿಗೆ ಒಪ್ಪಂದ ಮಾಡಿಕೊಂಡು ಆತನಿಗೆ ಕೋಟಿ ಕೋಟಿ ಹಣ ನೀಡಿತ್ತು. ಒಪ್ಪಂದದನ್ವಯ ಒಮರ್ ಮುಲ್ಲಾ ಇರಾನ್ ಚಾಬಹರ್ ಬಂದರಿನಿಂದ ಕುಲಭೂಷಣ್ ಜಾದವ್ ಅವರನ್ನು ಅಪಹರಣ ಮಾಡಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆತಂದರು ಎಂದು ಹೇಳಿದ್ದಾರೆ.

ಈ ಬಗ್ಗೆ ತಮಗೆ ಮಾಹಿತಿ ದೊರೆತಿದೆ. ಅಪರಹಣದ ವೇಳೆ ಜಾದವ್ ಅವರ ಕೈ-ಕಾಲು ಕಟ್ಟಿ, ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ಕಾರಿನಲ್ಲಿ ಪಾಕಿಸ್ತಾನಕ್ಕೆ ಕರೆತರಲಾಗಿತ್ತು. ಕಾರಿನಲ್ಲೇ ಇರಾನ್-ಬಲೂಟಿಸ್ತಾನ ಗಡಿ ಪ್ರದೇಶದ ಮಷ್ಕೆಲ್ ಪ್ರಾಂತ್ಯಕ್ಕೆ ಕರೆತರಲಾಗಿತ್ತು. ಬಳಿಕ ಅಲ್ಲಿಂದ ಬಲೂಚಿಸ್ತಾನ ರಾಜಧಾನಿ ಖ್ವೆಟ್ಟಾಗೆ ಅಲ್ಲಿಂದ ಇಸ್ಲಾಮಾಬಾದ್ ಕರೆದೊಯ್ಯಲಾಗಿತ್ತು. ಇರಾನ್ ನಲ್ಲಿ ಕುಲಭೂಷಣ್ ಜಾದವ್ ಓರ್ವ ಉದ್ಯಮಿಯಾಗಿದ್ದರು. ಐಎಸ್‌ಐ ಜಾದವ್ ರನ್ನು ಬಲೂಚಿಸ್ತಾನದಲ್ಲಿ ಸೆರೆಹಿಡಿಯಲಾಗಿತ್ತು ಎಂದು ಹೇಳಿಕೊಳ್ಳುತ್ತಿದೆ. ಆದರೆ ಜಾದವ್ ಗೆ ಬಲೂಚಿಸ್ತಾನ ಹೇಗಿದೆ ಎಂಬ ಮಾಹಿತಿ ಕೂಡ ಇರಲಿಲ್ಲ ಎಂದು ಮಮ ಖಾದಿರ್ ಹೇಳಿದ್ದಾರೆ.

ಮಮಖಾದಿರ್ ಹೇಳಿಕೆ ಇದೀಗ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡು ಮಾಡಿದ್ದು, ಖಾದಿರ್ ಹೇಳಿಕೆಗೆ ಈವರೆಗೂ ಪಾಕಿಸ್ತಾನ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ. (ವರದಿ-ಎಂ.ಎನ್)

Leave a Reply

comments

Related Articles

error: