ಮೈಸೂರು

ಜ.23 ಸಾಲುಹುಂಡಿಯ ಶ್ರೀಮುರುಡಬಸವೇಶ್ವರ ಓಕಳಿ ಜಾತ್ರಾ ಮಹೋತ್ಸವ

ಮೈಸೂರು, ಜ. 19 : ಜಯಪುರ ಹೋಬಳಿಯ ಸಾಲುಹುಂಡಿ, ದೊಡ್ಡಹುಂಡಿ, ಕೆರೆಹುಂಡಿ ಗ್ರಾಮಗಳ ಮಧ್ಯೆ ನೆಲೆಯೂರಿರುವ ಶ್ರೀ ಮುರುಡ ಬಸವೇಶ್ವರ ದೇವಸ್ಥಾನದಲ್ಲಿ  ಶ್ರೀಮಾರಿಕಾಂಭದೇವಿಯವರ ಮತ್ತು ನವಗ್ರಹ, ಶಿಬಿರ ಕಳಸ ಪ್ರತಿಷ್ಠಾಪನೆ ಹಾಗೂ ಓಕಳಿ ಜಾತ್ರ ಮಹೋತ್ಸವ ನಡೆಯುವುದು.

ಜಾತ್ರ ಮಹೋತ್ಸವವು ಇದೇ ಜ.18 ರಿಂದ 23ರವರೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಶೋಡಷೋಪಚಾರ ಪೂಜೆಗಳು, ಸಂಪ್ರಾದಾಯಿಕ ಆಚರಣೆಗಳು ಡಿ.ಸಾಲುಹುಂಡಿಯಲ್ಲಿ ಜರುಗುವವು. ಜ.23ರಂದು ಶ್ರೀ ಮುರುಡಬಸವೇಶ್ವರ ಓಕಳಿ ಜಾತ್ರಾ ಮಹೋತ್ಸವವನ್ನು ಸಿಎಂ ಸಿದ್ದರಾಮಯ್ಯನವರು ಚಾಲನೆ, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಅಧ್ಯಕ್ಷತೆ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಶ್ರೀಮುರುಡ ಬಸವೇಶ್ವರಸ್ವಾಮಿ ಮತ್ತು ಶ್ರೀಮಾರಮ್ಮ ದೇವರ ಸೇವಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎಂ.ಸಿದ್ದರಾಮೇಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಚಿವರಾದ ಹೆಚ್.ಎಂ.ರೇವಣ್ಣ, ಸಂಸದ ಆರ್.ಧ್ರುವನಾರಾಯಣ್, ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ರಘು ಆಚಾರ್ಯ ಇನ್ನಿತರ ಮುಖಂಡರು ಪಾಲ್ಗೊಳ್ಳುವರು ಎಂದು ತಿಳಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಜ.23ರಂದು ಅನ್ನಸಂತರ್ಪಣೆ ನಡೆಯುವುದು ಎಂದು ತಿಳಿಸಿದರು.

ಕಾರ್ಯಕಾರಿ ಸಮಿತಿ ಸದಸ್ಯರಾದ ರವೀಶ್, ಬಸವರಾಜು, ಚಿಕ್ಕಬುದ್ದಿ ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: