ಮೈಸೂರು

ವ್ಯಕ್ತಿ ನೇಣಿಗೆ ಶರಣು

ಮೈಸೂರು, ಜ.19:- ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಯಲಕ್ಷ್ಮಿಪುರಂನಲ್ಲಿ ನಡೆದಿದೆ.

ಮೃತನನ್ನು ಗೋಕುಲಂ ನಿವಾಸಿ ಸತೀಶ್(58)ಎಂದು ಗುರುತಿಸಲಾಗಿದ್ದು, ಈತ ಜಯಲಕ್ಷ್ಮಿಪುರಂನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ನೇಣಿಗೆ ಶರಣಾಗಿದ್ದ. ಅಲ್ಲಿನ ನಿವಾಸಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಜಯಲಕ್ಷ್ಮಿಪುರಂ ಠಾಣೆಗೆ ಮಾಹಿತಿ ನೀಡಿದ್ದು, ಸ್ಳಕ್ಕೆ ಇನ್ಸಪೆಕ್ಟರ್ ಪ್ರಕಾಶ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: