ಕರ್ನಾಟಕ

ಕೋಳಿ ಮೊಟ್ಟೆಯಲ್ಲಿ ಹಾವಿನ ಮರಿ ಹೋಲುವ ರೀತಿಯ ಜೀವಿ ಪತ್ತೆ

ರಾಜ್ಯ(ಮಂಡ್ಯ)ಜ.19:- ಕೋಳಿ ಮೊಟ್ಟೆಯಲ್ಲಿ ಹಾವಿನ ಮರಿ ಹೋಲುವ ರೀತಿಯ ಜೀವಿ ಪತ್ತೆಯಾಗಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದಲ್ಲಿ ಕೋಳಿ ಮೊಟ್ಟೆಯೊಳಗೆ ನಾಗರ ಹಾವಿನ ರೀತಿಯ ಜೀವಿ ಪತ್ತೆಯಾಗಿದೆ. ಗ್ರಾಮದ ಕೃಷ್ಣ ಎಂಬುವವರ ಮನೆಯಲ್ಲಿ ಪತ್ತೆಯಾಗಿದ್ದು, ಜನರಲ್ಲಿ ಕುತೂಹಲ ಕೆರಳಿದೆ. ಕೃಷ್ಣ ಎಂಬವರ ಮನೆ ಬಳಿಗೆ ಸಾಗಿ ಬಂದ ಜನರು ಹಾವಿನ ಮರಿ ರೀತಿ ಜೀವಿ ಕಂಡು ದಂಗಾಗಿದ್ದಾರೆ. ಭ್ರೂಣ ಅರೆಬರೆ ಬೆಳೆದಿರುವುದೇ ಹಾವಿನ ಮರಿ ರೀತಿ ಕಾಣುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದ್ದು,ಪಶು ವೈದ್ಯರಿಗೆ ವಿಷಯ ತಿಳಿಸಿ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: