ಕರ್ನಾಟಕಪ್ರಮುಖ ಸುದ್ದಿ

ಬಿಜೆಪಿ ಕಟ್ಟಿ ನರೇಂದ್ರ ಮೋದಿ ಕೈ ಬಲಪಡಿಸಲು ರಾಜ್ಯದ ಜನರಿಗೆ ಮನವಿ ಮಾಡಿದ ಎಸ್.ಎಂ.ಕೃಷ್ಣ

ರಾಜ್ಯ(ಮಂಡ್ಯ)ಜ.19:- ರಾಜ್ಯದಲ್ಲಿ ದೊಡ್ಡ ಪರಿವರ್ತನೆ ತರುವ ಸಲುವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ 200 ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಮಂಡ್ಯ ಮದ್ದೂರಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಜಿಲ್ಲೆಯ ಮುಖಂಡರೊಂದಿಗೆ ಯಡಿಯೂರಪ್ಪ ಅವರಿಗೆ ವ್ಯಕ್ತಿಗತ ಸ್ವಾಗತ ಕೋರುತ್ತೇನೆ. 2014 ರಲ್ಲಿ ಭಾರತ ದೊಡ್ಡ ಪರಿವರ್ತನೆ ಕಂಡಿತು. ಆ ಪರಿವರ್ತನೆಗೆ ಕಾರಣರಾದ ನರೇಂದ್ರಮೋದಿ ಶ್ರೀಸಾಮಾನ್ಯನ ಆಶೀರ್ವಾದದಿಂದ ಪ್ರಧಾನಿಯಾದರು. ಅವರು ನಿಷ್ಕಳಂಕವಾಗಿ ದೇಶದ ಬೆಳವಣಿಗೆಗೆ ಪೂರಕವಾದ ಆಡಳಿತ ಕೊಟ್ಟಿದ್ದಾರೆ. ಮುಂದೆ ಇತಿಹಾಸ ಬರೆಯುವವರು ನರೇಂದ್ರಮೋದಿಯಿಂದ ಆದ ಪರಿವರ್ತನೆ ಬಗ್ಗೆ ಬರೆಯುವವರಿದ್ದಾರೆ. ದೇಶದ ಜನ ಭ್ರಷ್ಟಾಚಾರದಿಂದ ಬೇಸತ್ತಿದ್ದರು. ಹಿಂದೆ ಕಾಂಗ್ರೆಸ್ ನ ಆಡಳಿತದಲ್ಲಿ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಹಲವಾರು ಕೆಟ್ಟ ಬೆಳವಣಿಗೆ ನೋಡಿದೆವು. ಜನರಿಗೆ ಅದರಿಂದ ಮುಕ್ತಿ ಬೇಕಾಗಿತ್ತು. ಮುಕ್ತಿ ಕಾಣಲು ಪ್ರಧಾನಿಯವರನ್ನ ದೇಶದ ಜನರೇ ಸೃಷ್ಟಿ ಮಾಡಿದರು ಎಂದರು.

ಕಳೆದ ಮೂರು ವರ್ಷದಲ್ಲಿ ಕೇಂದ್ರ ಸರ್ಕಾರದ ಮೇಲೆ ಆರ್ಥಿಕ ಕಳಂಕವನ್ನು ಯಾರಾದರೂ ಮಾಡಲು ಸಾಧ್ಯವಾಯಿತೇ?ಪಾರದರ್ಶಕತೆ ಇರುವ ಕಡೆ ತಪ್ಪು ಮಾಡಲು ಸಾಧ್ಯವಿಲ್ಲ. ಇಂದು ಭಾರತ ದೇಶ ವಿಶ್ವ ಸಮುದಾಯದಲ್ಲಿ ದೊಡ್ಡ ಹೆಸರು ಮಾಡಿದೆ.ಮಾಜಿ ವಿದೇಶಾಂಗ ಸಚಿವನಾಗಿ ಹತ್ತಾರು ದೇಶ ಸುತ್ತಿ ಬಂದಿದ್ದೇನೆ. ಪ್ರಾಮುಖ್ಯತೆ ಮತ್ತು ಅಗ್ರಮಾನ್ಯತೆ ಸಿಕ್ಕದೆ.19 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ.ಎಲ್ಲರೂ ಆದರ್ಶದಾಯಕ ಕೆಲಸ ಕೊಟ್ಟಿದ್ದಾರಾ ಇಲ್ಲವಾ ಎಂಬ ಬಗ್ಗೆ ಬಿಜೆಪಿ ರಾಷ್ಟ್ರನಾಯಕರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪರಿವರ್ತನಾ ಯಾತ್ರೆ ಮುಖ್ಯ ಉದ್ದೇಶ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಮಹಾನ್ ಉದ್ದೇಶ ಹೊಂದಿದೆ. ಆ ಉದ್ದೇಶದಿಂದ ನಾವು ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದೇವೆ. ಯಡಿಯೂರಪ್ಪ ನಾಳೆ ಮುಖ್ಯಮಂತ್ರಿ ಆಗುತ್ತಾರೆ. ಅವರು ನರೇಂದ್ರ ಮೋದಿ ಪ್ರತಿಬಿಂಬದ ಆಡಳಿತ ನೀಡಲು ಬದ್ದರಾಗಬೇಕಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಹೊಸದಾಗಿ ಬಿಜೆಪಿ ಪ್ರವೇಶ ಮಾಡುತ್ತಿದೆ. ಇಂದು ಅವರ ಕೈಗಳನ್ನು ಬಲಪಡಿಸಲು ನಾವು ಬರುತ್ತಿದ್ದೇವೆ. ನಾನು ಈ ವೇದಿಕೆಯಿಂದ ರಾಜ್ಯದಲ್ಲಿರುವ ನನ್ನ ಅಭಿಮಾನಿಗಳಲ್ಲಿ ಬಿಜೆಪಿಗೆ ಬರುವಂತೆ ಮನವಿ ಮಾಡುತ್ತಿದ್ದೇನೆ. ಬಿಜೆಪಿ ಕಟ್ಟಿ ನರೇಂದ್ರ ಮೋದಿ ಕೈ ಬಲಪಡಿಸಲು ರಾಜ್ಯದ ಜನರಿಗೆ ಎಸ್‌ಎಂ.ಕೃಷ್ಣ ಮನವಿ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: