ಮೈಸೂರು

ಕಣ್ಣಿನ ಉಚಿತ ತಪಾಸಣಾ ಶಿಬಿರ

ಮೈಸೂರು,ಜ.20:-ಮಧುಮೇಹ ರೋಗಿಗಳಿಗೆ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಒಂಟಿಕೊಪ್ಪಲಿನಲ್ಲಿರುವ ಶ್ರೀರಾಮ ಕಲ್ಯಾಣ ಮಂದಿರದಲ್ಲಿ ಅಂತರರಾಷ್ಟ್ರೀಯ ಲಯನ್ ಸಂಸ್ಥೆ-317ರಡಿ ಆಯೋಜಿಸಲಾಗಿತ್ತು.

ಶುಕ್ರವಾರ ಲಯನ್ಸ್ ಕ್ಲಬ್ ಆಫ್ ಮೈಸೂರು, ಕ್ಲಾಸಿಕ್ ಹಾಗೂ ಎಸ್.ಬಿ.ಎಂ ಮಂಜು ಸ್ನೇಹ ಬಳಗ ಮತ್ತು ನೇತ್ರಧಾಮ ಸೂಪರ್ ಸ್ಪೆಶಾಲಿಸ್ಟ್ ಕಣ್ಣಿ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರ ಮತ್ತು ಮಧುಮೇಹ ರೋಗಿಗಳ ತಪಾಸಣಾ ಶಿಬಿರದ ಪ್ರಯೋಜನವನ್ನು ನೂರಾರು ಮಂದಿ ಪಡೆದುಕೊಂಡರು. ಕಣ್ಣಿನ ಪೊರೆ ಇರುವ ಹತ್ತು ಶಿಬಿರಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಈ ಸಂದರ್ಭ ಅಧ್ಯಕ್ಷ ದೇವಿಪ್ರಸಾದ್, ಜಲ್ಲಾಧ್ಯಕ್ಷ ಲೋಕೇಶ್.ಜೆ, ಕಾರ್ಯದರ್ಶಿ ಧರ್ಮರಾಜ್, ಪ್ರಾಂತೀಯ ಅಧ್ಯಕ್ಷ ಕೃಷ್ಣಚನ್ನೇಗೌಡ, ಡಿಸೋಜ,ರಾಮಚಂದ್ರ ಹಾಗೂ ನಗರಪಾಲಿಕೆಯ ಸದಸ್ಯ ಎಸ್.ಬಿ.ಎಂ ಮಂಜುಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: