ಮೈಸೂರು

ಜ.30 ರಿಂದ ಎಐಟಿಯುಸಿಯಿಂದ ಅನಿರ್ದಿಷ್ಟಾವಧಿ ಮುಷ್ಕಾರ

ಮೈಸೂರು, ಜ. 20 : ಸಾರಿಗೆ ನಿಗಮಗಳ ಆಡಳಿತ ವರ್ಗದ ಕಾರ್ಮಿಕ ವಿರೋಧಿ ನೀತಿ,  ಬಿಎಂಟಿಸಿ ಮತ್ತು ವಾಯುವ್ಯ ನಿಗಮಗಳ ನೌಕರರಿಗೆ ಗ್ಯಾಚ್ಯೂಯಟಿ ಹಣ, ಜೀವವಿಮಾ ಸಂಸ್ಥೆಯ ಪ್ರೀಮಿಯಮ್, ಸಹಕಾರಿ ಸಂಘಗಳ ಸಾಲ ಮರು ಪಾವತಿ ಮತ್ತು ಡಿಆರ್ಬಿಎಫ್, ಲೀವ್ ಇನ್ ಕ್ಯಾಷ್ ಮೆಂಟ್, ಬಾಕಿ ವೇತನ, ಮೆಡಿಕಲ್ ಬಿಲ್ ಬಾಕಿ ಹೀಗೆ ಹತ್ತು ಹಲವು ಬೇಡಿಕೆಗಳ ಈಡೇರಿಕೆಗಾಗಿ ಕೆಎಸ್ ಆರ್ ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಇಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದೆ.

ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತಸುಬ್ಬ ರಾವ್ ಅವರು ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಂಸ್ಥೆಯಲ್ಲಿ ಹತ್ತು ಹಲವು ಜಟಿಲ ಸಮಸ್ಯೆಗಳಿದ್ದು ಅವುಗಳ ಈಡೇರಿಕೆಗಾಗಿ ಇಂದು ರಾಜ್ಯಾಧ್ಯಾಂತ ಎಲ್ಲಾ ವಿಭಾಗಗಳ ಕಚೇರಿಗಳ ಮುಂದೆ ಸಾಂಕೇತಿ ಧರಣಿ ನಡೆಸಿದ್ದು, ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಜ.30 ರಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಬಿಎಂಟಿಸಿ ಮತ್ತು ವಾಯುವ್ಯ ಸಾರಿಗೆ ನಿಗಮಗಳು ಸುಮಾರು 21 ಕೋಟಿ ರೂ ಹಣವನ್ನು ಕಾರ್ಮಿಕರಿಗೆ ನೀಡದೆ ಬಾಕಿ ಉಳಿಸಿಕೊಂಡಿದೆ, ನೌಕರರ ವೇತನದಿಂದ ಹಿಡಿದಿರುವ ಜೀವವಿಮಾ ಪ್ರೀಮಿಯರ್ ಹಣ, ಸಹಕಾರಿ ಸಂಘಗಳಿಗೆ ಕೊಡಬೇಕಾಗಿರುವ ಹಣ, ಡಿಆರ್ಬಿಫ್ ವಂತಿಕೆಗಳನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ಕಾಲಕಾಲಕ್ಕೆ ಕಟ್ಟಿಲ್ಲ, ತುಟ್ಟಿ ಭತ್ಯೆ ಸಂದಾಯವಾಗಿಲ್ಲ, ಲೀವ್ ಇನ್ ಕ್ಯಾಷ್ ಮೆಂಟ್ ಹಣ ನೀಡಿಲ್ಲ, ನೌಕರರಿಗೆ ಮಿತಿ ಮೀರಿದ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ ಅವರು ತುಮಕೂರು, ಚಾಮರಾನಗರ, ಚಿಕ್ಕಮಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ನೆಲೆಯೂರಿರುವ ಹಲವಾರು ಭ್ರಷ್ಟ ಅಧಿಕಾರಗಳ ವರ್ಗವರ್ಣೆಯಾಗಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್, ಮೈಸೂರು ವಿಭಾಗದ ಅಧ್ಯಕ್ಷ ಎಚ್.ಆರ್.ಶೇಷಾದ್ರಿ, ಜಂಟಿ ಕಾರ್ಯದರ್ಶಿ ಟಿ.ಎಲ್.ರಾಜಗೋಪಾಲ್, ನಗರ ಕಾರ್ಯದರ್ಶಿ ವಿಜಯ ಕುಮಾರ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: