ಮೈಸೂರು

ದಿ.ಚಿಕ್ಕಮಾದು ನಿವಾಸಕ್ಕೆ ಹೆಚ್.ವಿಶ್ವನಾಥ್ ಭೇಟಿ

ಮೈಸೂರು,ಜ.21:- ಕಾಂಗ್ರೆಸ್ ಕಡೆ ಮುಖ ಮಾಡಿದ  ಶಾಸಕ ಚಿಕ್ಕಮಾದು ಕುಟುಂಬ ಹಿನ್ನೆಲೆಯಲ್ಲಿ ಚಿಕ್ಕಮಾದು ನಿವಾಸಕ್ಕೆ ಮಾಜಿ ಸಂಸದ ಹೆಚ್.ವಿಶ್ವನಾಥ್, ಶಾಸಕ ಸಾ.ರಾ.ಮಹೇಶ್ ಭೇಟಿ ನೀಡಿ ಮಾತುಕತೆ ನಡೆಸಿದರು.

ಚಿಕ್ಕಮಾದು ಕುಟುಂಬದ ಜೊತೆ ಜೆಡಿಎಸ್ ಮುಖಂಡರು ಮಾತುಕತೆ ನಡೆಸಿದರು. ಚಿಕ್ಕಮಾದು ಪುತ್ರ ಅನಿಲ್ ಗೆ ಜೆಡಿಎಸ್ ಟಿಕೆಟ್ ಪಕ್ಕ ಅನಿಲ್ ಗೆ ಹೆಚ್.ಡಿ.ಕೋಟೆ ಕ್ಷೇತ್ರದ ಜೆಡಿಎಸ್ ಟಿಕೇಟ್ ನೀಡುವ ಬಗ್ಗೆ ಕುಮಾರಸ್ವಾಮಿ  ಹೇಳಿದ್ದಾರೆ. ಕುಟುಂಬಸ್ಥರ ಭೇಟಿ ಬಳಿಕ ಮಾಧ್ಯಮಗಳಿಗೆ  ಜೆಡಿಎಸ್ ಮೊದಲ ಪಟ್ಟಿಯಲ್ಲಿಯೇ ಅನಿಲ್ ಚಿಕ್ಕಮಾದುಗೆ ಟಿಕೇಟ್ ನೀಡುವ ಬಗ್ಗೆ ವರಿಷ್ಠರು ಹೇಳಿದ್ದಾರೆ. ಪಕ್ಷಕ್ಕೆ ಯಾರೆ ಬಂದರೂ ಸ್ವಾಗತ ಇದೆ. ಚಿಕ್ಕಣ್ಣ ಆಗಮನ ಹಿನ್ನಲೆ ಉಂಟಾಗಿದ್ದ ಗೊಂದಲ ಬಗೆಹರಿದಿದೆ. ಇನ್ನೆರಡು ದಿನಗಳಲ್ಲಿ ಕುಮಾರಸ್ವಾಮಿ ಅವರೇ ಅನಿಲ್ ಗೆ ಟಿಕೇಟ್ ಘೋಷಣೆ ಮಾಡಲಿದ್ದಾರೆ. ಚಿಕ್ಕಮಾದು ಪುತ್ರ ಅನಿಲ್   ಪ್ರಕರಣ ಸಂಬಂಧಿಸಿದಂತೆ ಕುಮಾರಸ್ವಾಮಿ  ದೂರವಾಣಿ ಮೂಲಕ ನನ್ನ ಜೊತೆ ಮಾತನಾಡಿದ್ದಾರೆ.  ಟಿಕೇಟ್ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಕುಟುಂಬ,  ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಒಮ್ಮತದ ತೀರ್ಮಾನಕ್ಕೆ ಬರುತ್ತೇವೆ ಎಂದಿದ್ದಾರೆ ಎಂದರು.    (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: