ಮೈಸೂರು

ಜ.26-28ರವರೆಗೆ ‘ಆಂದೋಲನ ಕಪ್’ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ

.ಮೈಸೂರು, ಜ. 22 :  ಹಿರಿಯ ಪತ್ರಿಕೋದ್ಯಮಿ ದಿ .ರಾಜಶೇಖರ ಕೋಟಿ ಸ್ಮರಣಾರ್ಥ ‘ಆಂದೋಲನ ಕಪ್’ ರಾಜ್ಯ ಮಟ್ಟದ ಮುಕ್ತ  ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಿದೆ.

ಇದೆ ಜ 26  ರಿಂದ 28ರ ವರೆಗೆ ಬೋಗಾದಿಯಲ್ಲಿರುವ  ಅದಿತ್ಯ ಸ್ಪೋರ್ಟ್ಸ್ ಅರೆನಾದಲ್ಲಿ ಹಮ್ಮಿಕೊಂಡಿದ್ದು, ಹಲವು ವಿಭಾಗಗಳಲ್ಲಿ ಪಂದ್ಯಾವಳಿ ನಡೆಯುವುದು ಎಂದು ಮೈಸೂರು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಎಸ್.ಸಿ ಪ್ರಭು ಸೋಮವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ರಾಮ್ ಬ್ಯಾಡ್ಮಿಂಟನ್ ಅಕಾಡಮಿ,  ಮೈಸೂರು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿರುವ ಪಂದ್ಯಾವಳಿಯನ್ನು ಸಂಸದ ಪ್ರತಾಪ್ ಸಿಂಹ ಚಾಲನೆ ನೀಡುವರು, ಸಮಾರೋಪದಲ್ಲಿ ರಾಜಶೇಖರ ಕೋಟಿ ಅವರ ಪುತ್ರಿ ಪ್ರಶಸ್ತಿ ಪ್ರದಾನ ಮಾಡುವರು ಎಂದರು.

ಜ. 26ರಂದು ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ ಮತ್ತು ಡಬಲ್ಸ್, ನಂತರ ಮಿಕ್ಸಡ್, ಜ. 27 ರಂದು   10, 13, 15, 19 ವರ್ಷದೊಳಗಿನವರಿಗೆ ಸಿಂಗಲ್ಸ್,  ಡಬಲ್ಸ್ ಪಂದ್ಯಗಳು, ಅದರಂತೆ ಜ. 28ರಂದು 45 ವರ್ಷದೊಳಗೆ ಹಾಗೂ ಮೇಲ್ಪಟ್ಟವರಿಗಾಗಿ  ಪಂದ್ಯಾವಳಿಯನ್ನು ಆಯೋಜಿಸಿದ್ದು, ಪ್ರತಿ ವಿಭಾಗದಲ್ಲಿ ವಿನರ್ಸ್ ಮತ್ತು ರನ್ನರ್ಸ್ ಗಳಿಗೆ ಪ್ರಮಾಣ ಪತ್ರ ಸೇರಿದಂತೆ ಒಟ್ಟು ಪಂದ್ಯಾವಳಿಯಲ್ಲಿ ಸುಮಾರು 1,50 ಲಕ್ಷ ರೂಗಳಷ್ಟು ನಗದು ಬಹುಮಾನ ನೀಡಲಾಗುವುದು. ಆಸಕ್ತರು ಜ.24ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಶ್ವಥ್ ಚೆಂಗಪ್ಪ (9008817118), ನಾಗರಾಜ (9620609526) ಸುದೀರ್ ನಾಯಕ್ (9448075335) ಎಂದು ತಿಳಿಸಿದರು.

45 ವರ್ಷ ಮೇಲ್ಪಟ್ಟ ಹವ್ಯಾಸಿಗಳ ಪಂದ್ಯಾವಳಿಯಲ್ಲಿ ವಿನ್ನರ್ಸ್ ಮತ್ತು ರನ್ನರ್ಸ್ ಗೆ 10 ಹಾಗೂ 6 ಸಾವಿರ ನಗದು ಪ್ರಶಸ್ತಿ ನೀಡಲಿದ್ದು, ರಾಜ್ಯಾಧ್ಯಂತ 300ಕ್ಕೂ ಕ್ರೀಡಾಪಟುಗಳು ಭಾಗಿಯಾಗುವರು, ರಾಷ್ಟ್ರೀಯ ಕ್ರೀಡಾಪಟುಗಳು ರಾಮೇಶ್ವರ, ರಚನಾ ಕಿಶನ್ ಗಣಪತಿ, ರೋಹಿತ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಅಶ್ವತ್ ಚೆಂಗಪ್ಪ, ನಾಗರಾಜು, ಸುದೀರ್ ನಾಯಕ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: