ಮೈಸೂರು

ಬಿ.ಎಸ್.ಯಡಿಯೂರಪ್ಪಗೆ ಘೇರಾವ್ ಹಾಕಿದ ದಲಿತ ಸಂಘಟನೆ

ಮೈಸೂರು,(ನಂಜನಗೂಡು),ಜ.22-ಬಿಜೆಪಿ ಪರಿವರ್ತನಾ ರ್ಯಾಲಿಯ ಹಿನ್ನೆಲೆಯಲ್ಲಿ ಸೋಮವಾರ ನಂಜನಗೂಡು ತಾಲೂಕಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾರು ತಡೆದ ದಲಿತ ಸಂಘಟನೆಗಳು ಘೇರಾವ್ ಹಾಕಿದರು.

ಬಿ.ಎಸ್.ಯಡಿಯೂರಪ್ಪ ಕಾರು ತಡೆದು ಘೇರಾವ್ ಹಾಕಿದ ಸಂಘಟನೆಯವರು ಅನಂತಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಕಾರರ ಮನವೊಲಿಸಲು ಕಾರು ಇಳಿದು ಬಂದ ಯಡಿಯೂರಪ್ಪ ಅವರನ್ನು ರಾಜ್ಯದಲ್ಲಿ ನಿಮ್ಮ ಅಜೆಂಡಾ ಏನು ಎಂದು ಪ್ರಶ್ನಿಸಿದರು. ಈಗಾಗಲೇ ಅನಂತ ಕುಮಾರ್ ಕ್ಷಮೆ ಕೇಳಿದ್ದಾರೆ ಎಂದು ಯಡಿಯೂರಪ್ಪ ಹೇಳಿದರೂ ಪ್ರತಿಭಟನಕಾರರು ಒಪ್ಪಲಿಲ್ಲ. ಕೊನೆಗೆ ಯಡಿಯೂರಪ್ಪ ಅವರು ಬೇರೆ ವಿಧಿಯಿಲ್ಲದೆ ಸ್ಥಳದಿಂದ ತೆರಳಿದರು. ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: