ಮೈಸೂರು

ಜ.26ರಂದು ರಾಜ್ಯಮಟ್ಟದ ಚಿತ್ಪಾವನ ಮಹಿಳಾ ಸಮಾವೇಶ : ಸಾಧಕರಿಗೆ ಸನ್ಮಾನ

ಮೈಸೂರು, ಜ. 23 : ಚಿತ್ಪಾವನ ಬ್ರಾಹ್ಮಣ ಸಂಘ, ಚಿತ್ಪಾವನ ಸಮಾಜ ಸಹಯೋಗದಲ್ಲಿ ರಾಜ್ಯಮಟ್ಟದ ಚಿತ್ಪಾವನ ಮಹಿಳಾ ಸಮಾವೇಶವನ್ನು ಜ.26ರಂದು ಖಿಲ್ಲೆ  ಮೊಹಲ್ಲಾದ ಶ್ರೀ ವಿದ್ಯಾಶಂಕರ ನಿಲಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದೆ ಎಂದು ಸ್ಥಳೀಯ ಚಿತ್ಪಾವನ ಮಹಿಳಾ ಸಂಘದ ವಿಜಯ ವಿಷ್ಣುಭಟ್ ಡೋಂಗ್ರೆ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯುನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 9ಕ್ಕೆ ಉದ್ಘಾಟನಾ ಸಮಾರಂಭ, ಹಿರಿಯ ನ್ಯಾಯವಾದಿ ಮೀರಾ ನರಹರಿ ಫಡ್ಕೆ ಅಧ್ಯಕ್ಷತೆ, ಮುಖ್ಯ ಭಾಷಣಕಾರರಾಗಿ ಕರ್ನಾಟಕ ರಾಜಯ ಮುಕ್ತ ವಿವಿ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ , ಡಾ.ಮಧುರಾ ಮುಕುಂದ ಮರಾಠೆ ಅವರಿಂದ ಪುಸ್ತಕ ಹಾಗೂ ವಸ್ತುಪ್ರದರ್ಶನ ಬಿಡುಗಡೆ ನಂತರ ನಡೆಯುವ ವಿಚಾರ ಗೋಷ್ಠಿಗಳಲ್ಲಿ ಚಿತ್ಪಾವನ ಮಹಿಳೆ –ಇತಿಹಾಸ ಪರಂಪರೆ, ವರ್ತಮಾನ, ಸ್ವ ಉದ್ಯೋಗ- ಸಾಧಕ- ಭಾಧಕ-ಚಿಂತನ-ಮಂಥನ ವಿಷಯವಾಗಿ ವಿವಿಧ ಕ್ಷೇತ್ರ ಪ್ರಗತಿಪರರು, ತಜ್ಞರು ವಿಷಯ ಮಂಡಿಸುವರು. ಮಂಗಳೂರಿನ ಚಿತ್ಪಾವನ ಬ್ರಾಹ್ಮಣ ಸಂಘದಿಂದ ಚಿತ್ಪಾವನ ಸಾಂಪ್ರದಾಯಿಕ ಆಚರಣೆಗಳ ಪ್ರಾತ್ಯಕ್ಷಿಕೆ ಮಂಡಿಸುವರು ಎಂದು ತಿಳಿಸಿದರು.

ಸಮಾವೇಶದ ಸಂಚಾಲಕಿ ವೀಣಾ ಬಿ.ಡೋಂಗ್ರೆ ಅವರು ಕಾರ್ಯಕ್ರಮದ ವಿವರ ನೀಡಿ, ಸಂಜೆ.4.30ಕ್ಕೆ ಸಮಾರೋಪ ಸಮಾರಂಭ, ಮುಖ್ಯ ಅತಿಥಿಗಳಾಗಿ ವಿದ್ಯಾ ಸಂದೇಶ ಡೋಂಗ್ರೆ, ಭರತನಾಟ್ಯ ಕಲಾವಿದೆ ಡಾ.ವಿದುಷಿ ಕೃಪಾ ಫಡ್ಕೆ, ಕರ್ನಾಟಕ ಬ್ಯಾಂಕ್ ಕೇಂದ್ರ ಕಚೇರಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್  ಸುಮನಾ ಜೋಶಿ ಭಾಗವಹಿಸುವರು. ವಿಜಯಾ ವಿಷ್ಣು ಭಟ್ ಡೋಂಗ್ರೆ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಕರ್ನಾಟಕ ಸಹಕಾರ ಅಪೆಕ್ಸ್ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ಗೌರಿ ದಾಮ್ಲೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು, ನಂತರ ವಿಶೇಷ ಸಾಧನೆಗೈದ ಚಿತ್ಪಾವನ ಮಹಿಳೆಯರಿಗೆ ಗೌರವಾರ್ಪಣೆ ನಡೆಸಲಾಗುವುದು, 500ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹು ಪ್ರಮುಖ ಪಾತ್ರವಹಿಸಿದ ಮಹಾರಾಷ್ಟ್ರ ಮೂಲದ ಚಿತ್ಪಾವನ ಸಮುದಾಯವು, ರಾಜ್ಯದಲ್ಲಿ ಸುಮಾರು 25ಸಾವಿರಕ್ಕೂ ಅಧಿಕ ಮಂದಿಯಿದ್ದು, ರಾಜ್ಯದ ಸಾಂಪ್ರದಾಯವನ್ನು ಅನುಸರಿಸುವ ಮೂಲಕ ಸ್ಥಳೀಯರೆ ಆಗಿದ್ದೇವೆ, ಅಲ್ಪಸಂಖ್ಯಾತರಾಗಿರುವ ನಮಗೆ ಸರ್ಕಾರದಿಂದ ಯಾವುದೇ ಮೀಸಲಾತಿ ಇಲ್ಲವೆಂದು ತಿಳಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಶೋಭಾ ಎಸ್.ಹೆಬ್ಬಾರ್, ಪದಾಧಿಕಾರಿಗಳಾದ ಗೀತಾ, ಯಮುನಾ ಮರಾಠಿ, ಡಾ. ಕೃಪಾ ಫಡ್ಕಿ ಮೊದಲಾದವರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: